ನೀನು ಬಿಸಿಲಲ್ಲಿದ್ದರೆ ನಿನ್ನ ನೆರಳು ನಾ,
ನೀನು ನೆರಳಲ್ಲಿದ್ದರೆ ನೆರಳು ಕೊಡುವ ಮರವು ನಾ,
ನೀನಾಡುವ ಸ ರೀ ಗ ಮ ಕೆ ಸ್ವರವು ನಾ,
ನೀ ಬರೆವ ಒಲವಿನ ಒಲೆಗೆ ಪದವು ನಾ,
ನಿನ್ನ ಕೈ ಬಳೆಯು ನಲುಗಿದಾಗ ಹೊಮ್ಮಿದ ನಾದವು ನಾ,
ನೀ ನಡೆವಾಗ ಹೊರಟ ಗೆಜ್ಜೆಯ ದನಿಯು ನಾ,
ನೀ ಮುಡಿದ ಹೂವಿನ ಪರಿಮಳವು ನಾ,
ನಿನ್ನ ಕೆಂದುಟಿಯ ಮೇಲಿನ ಜೇನು ನಾ,
ನಿನ್ನ ಕೆಂಪಾದ ಕೆನ್ನೆಯ ಮೇಲಿನ ನಾಚಿಕೆಯು ನಾ,
ನಿನ್ನ ಅಂದದ ಅಂಗೈನ ಮೇಲಿನ ಗೋರಂಟಿಯು ನಾ,
ನಾ ಬರೆದ ಪತ್ರದ ಪುಟಗಳ ಬಿಡಿಸುವ ನಿನ್ನ ಕಿರುಬೆರಳ ಉಗುರು ನಾ,
ನೀ ಹಿಡಿದ ಬಣ್ಣದ ಕುಂಚ ನಾ, ಆ ಕುಂಚದಲ್ಲಿ ಬಿಡಿಸುವ ಚಿತ್ರ ನಾ,
ನಿನ್ನ ಕಂಗಳ ಸಾಗರದಲ್ಲಿ ತೇಲುವ ಹನಿಯು ನಾ,
ತಂಗಾಳಿ ಬೀಸಿದಾಗ ಹಾರಾಡುವ ನಿನ್ನ ಮುಂಗುರುಳು ನಾ,
ನಿನ್ನ ಪ್ರೀತಿಗೆ ಸೋತೆನ, ಸೋತು ಸೆರೆಯಾದೆನ,
ಇಂತಿ ನಿನ್ನ ಪ್ರೀತಿಯ ...
ಕಂಪನ
1 comment:
really nice...kannadakke jeeva tumbuva nimma perayatnakke .naanu salute maaditiddene
Post a Comment