ಸರಿ ರಾತ್ರಿಯಲ್ಲಿ ಕಹಿ ನೆನಪುಗಳ ಕೆದಕುತ,
ಮುಗಿದ ದಿನಗಳ ಗುಣಗಾನ ಮಾಡುತ,
ನಾಳೆಯ ಸುಂದರ ಸ್ವಪ್ನಗಳ ಕಲ್ಪನೆಯೊಂದಿಗೆ,
ಸ್ನೇಹದ ಚಿಪ್ಪಿನಲ್ಲಿ ಪ್ರೀತಿಯ ಮುತ್ತನಿಟ್ಟಂತೆ,
ಮೆತ್ತನೆ ಹಾಸಿಗೆಯ ಮೇಲೆ ಮಲಗಿರುವ ನಿನ್ನ ಮೇಲೆ,
ಮುಂಜಾನೆ ಮಂಜಿನ ತೆರೆಯ ಸರಿಸಿ,
ಬೆಳ್ಳಿ ರಥದ ಮೇಲೆ ಬಂದ ಭಾಸ್ಕರನ ಹೊಂಗಿರಣ,
ಎಲೆಗಳ ಮೇಲಿನ ಮುತ್ತಿನಂಥ ಇಬ್ಬನಿಯ ಚುಂಬನ,
ಹಕ್ಕಿಗಳ ಇಂಪಾದ ಚಿಲಿಪಿಲಿಯ ಆಹ್ವಾನ,
ಹೊಸ ಹುರುಪಿನೊಂದಿಗೆ ಎದ್ದ ನಿನ್ನ ಮೇಲೆ ತಂಗಾಳಿಯ ಆಲಿಂಗನ,
ಆ ಸಿಹಿಗಾಳಿಗೆ ಹಾರಾಡಿದ ನಿನ್ನ ಮುಂಗುರುಳು ಕರಿಮೋಡಕ್ಕೆ ಸಮಾನ,
ಅತ್ತ ಇತ್ತ ಹುಡುಕುತ್ತಿರುವ ನಿನ್ನ ನಯನಗಳು ಹೆದರಿ ಓಡಿದ ಹರಿಣಗಳು,
ಹಾರುತ್ತಿರುವ ನಿನ್ನ ಹುಬ್ಬುಗಳು ಮುಂಗಾರು ಮಳೆಯ ಕಾಮನ ಬಿಲ್ಲು,
ನಿನ್ನ ಮುದ್ದಾದ ಮಾತುಗಳು ಕೋಗಿಲೆಗಳ ಗುಂಪಲ್ಲಿ ಹುಟ್ಟಿದ ಹಾಡುಗಳು,
ನೀನಾಡುವ ಇಂಪಾದ ಹಾಡುಗಳು ಹೂದೋಟದಲ್ಲಿ ಹಾರಾಡುವ ದುಂಬಿಯ ಜ್ಹೆಂಕಾರಗಳು,
ನಿನ್ನ ಸುಂದರ ರೂಪ ಕಾಣಲು, ನಿನ್ನ ಅಂಗೈಯನ್ನು ಸ್ಪರ್ಶಿಸಲು,
ನಿನ್ನ ಕೈ ಹಿಡಿದು ಮಾತನಾಡದೆ ಸುಂದರ ನದಿ ತೀರದಲ್ಲಿ ನಡೆಯಲು,
ಸೊಗಸಾದ ಸಂಜೆಯಲಿ ನಿನ್ನೊಂದಿಗೆ ಕುಳಿತು ಹರಟಲು,
ಕಾಯುತಿದೆ ನನ್ನ ಮನಸು,ಬೋಳಾದ ಮರವು ಚಿಗುರೊಡೆಯಲು ಹವಣಿಸಿ,
ವಸಂತ ಮಾಸವನ್ನು ಕಾಯುವಂತೆ,
ಇಂತಿ ನಿನ್ನ ಪ್ರೀತಿಯ ...
ಕಂಪನ
No comments:
Post a Comment