ಮಳೆ ನಿಂತರೂ ನಿಲ್ಲದು ನಿನ್ನ ನೆನಪುಗಳ ಸರಮಾಲೆ,
ಮಳೆಯಲ್ಲೇ ಕುಳಿತು ಬರೆದೆ ನಿನಗೊಂದು ಪ್ರೇಮದ ಓಲೆ,
ತೊಯ್ದ ಹಾಳೆಯ ಮೇಲೆ ಪದಪುಂಜಗಳ ಸಾಲೆ,
ನಿನ್ನ ಸ್ಪರ್ಶಿಸುವ ಗಾಳಿ ನನ್ನ ಉಸಿರಾಗಬೇಕೆಂದು,
ಮಳೆಬಿಲ್ಲಿನ ಮೇಲಿಂದ ಜಾರಿ ಬಂದು ನಿನ್ನ ಮೊಗವ ಮುತ್ತಿಕ್ಕುವ ಹನಿಯಾಗಬೇಕೆಂದು,
ನಿನ್ನ ತುಂಬು ಕಂಗಳಿಗೆ ನಾ ರೆಪ್ಪೆಯ ಚಾಮರವಾಗಬೇಕೆಂದು,
ಹುಣ್ಣಿಮೆಯಲ್ಲಿ ನಿನ್ನ ಚುಂಬಿಸುವ ಬೆಳದಿಂಗಳಾಗಬೇಕೆಂದು,
ನಿನ್ನ ಸ ರೀ ಗ ಮ ದ ಸೆರೆಯಲ್ಲಿ ನಾ ಬಂಧಿಯಾಗಬೇಕೆಂದು,
ನೀ ಬಯಸಿದ ಹೂವಿನ ಮಕರಂದವ ಹೀರುವ ದುಂಬಿಯಾಗಬೇಕೆಂದು,
ನಿನ್ನ ಪುಟ್ಟ ಹೃದಯಕ್ಕೊಂದು ಗೂಡಾಗಬೇಕೆಂದು,
ನೀ ಬರೆವ ಪತ್ರದ ಕೊನೆಯ ಸಾಲಾದರೂ ನಾನಾಗಬೇಕೆಂದು,
ಹೇ ಗೆಳತಿ,ಬಯಸಿ ಬಯಸಿ ಬರೆದ ನನ್ನ ಓಲೆಗೆ, ಉತ್ತರ ಎಂದು??????
ಇಂತಿ ನಿನ್ನ ಪ್ರೀತಿಯ...
ಕಂಪನ
4 comments:
ಬಯಸಿ ಬಯಸಿ ಬರೆದ ನಿನ್ನ ಓಲೆಗೆ....... ಇಗೋ ಹರಸಿ ಬಂದಿದೆ ಓಲವಿನ ಮಾತುಗಳು
೨೫ ಕವನಗಳು ನಿನ್ನಿಂದ ಹೊರಬಂದಿದಕ್ಕೆ ಅಭಿನಂದನೆಗಳು
ಹೀಗೆ ಮುಂದುವರೆಯಲಿ ನಿನ್ನ ಕವನಗಳ ಸರಣಿ ನನಗಾಗಿ ಮತ್ತು ಕೇಳುವ ಹೃದಯಗಳಿಗಾಗಿ..
ಅಭಿನಂದನೆಗಳು ಪ್ರದೀಪ್....
ನಿಮ್ಮ ಕವನ ತುಂಬಾ ಚೆನ್ನಾಗಿದೆ... ಹೀಗೆ ನಿಮ್ಮ ಪರಿಶ್ರಮ ಮುಂದುವರೆಯಲಿ.... ಯಶಸ್ಸಿನತ್ತ ಜೀವನ ಸಾಗಲಿ....
Super sir
Post a Comment