Tuesday, 23 September 2008

ಹೂಮನಗಳ ....

ಹೂಮನಗಳ ಮಾಡಿ ಪ್ರೀತಿಯ ಮಧು ತುಂಬಿದವಳೆ,
ನಿನ್ನ ರಾಗದ ಕಲರವದಲ್ಲಿ ಹೃದಯದ ಅಲೆ ಎಬ್ಬಿಸಿದವಳೇ,
ನಿನ್ನ ಗೆಜ್ಜೆ ಸದ್ದಿನಲ್ಲಿ ನನ್ನ ಮಾತು ನಿಲ್ಲಿಸಿದವಳೇ,
ಕೈ ಬಳೆ ನಾದದಲ್ಲಿ ಮಾತನಾಡುವವಳೇ,
ನನ್ನೆದೆ ಹಾಳೆಯಲ್ಲಿ ನಿನ್ನ ಕಿರುಬೆರಳ ಕುಂಚದಿಂದ ಚಿತ್ತಾರ ಬಿಡಿಸಿದವಳೇ,
ಕೆಂದುಟಿಯ ಕೊನೆಯಲ್ಲಿ ಮಿಂಚಿನಂತ ನಗೆಯ ಬೀರಿ ಮನಸು ಗೆದ್ದವಳೇ,
ಕೋರೈಸುವ ಕಣ್ಣೋಟದಿಂದ ನನ್ನ ಉಸಿರಾಟ ನಿಲ್ಲಿಸಿದವಳೇ,
ನಾಚಿದ ನಿನ್ನ ಕೆನ್ನೆಯ ರಂಗಿನಲ್ಲಿ ನನ್ನೇ ಮರೆಸಿದವಳೇ,
ಸ್ವಾತಿ ಮುತ್ತಿನ ಸೋನೆ ಮಳೆಯಂತೆ ಸುರಿದ ನಿನ್ನ ಪ್ರೀತಿಯಲ್ಲಿ....
ನಾ ತೇಲಿ ಹೋಗುವ ಮುನ್ನ,ನನ್ನೆದೆಯ ಗೂಡನು ಸೇರು ಚಿನ್ನ,
ಇಂತಿ ನಿನ್ನ ಪ್ರೀತಿಯ...
ಕಂಪನ

No comments: