ಮುಂಜಾನೆಯ ಚುಮು ಚುಮು ಚಳಿಯಲ್ಲಿ ನಿನ್ನ ಬೆಚ್ಚನೆ ಸ್ಪರ್ಶ ಕಂಡೆ,
ಮುಂಗುರುಳಿಗೆ ಮುತ್ತಿಡುವ ತಂಗಾಳಿಯಲ್ಲಿ ನಿನ್ನ ಮೊಗವ ಕಂಡೆ,
ಸಂಗೀತದ ಅಲೆಗಳ ಮೇಲೆ ತೇಲಿ ಬಂದ ಸುಪ್ರಬಾತದ ಸ್ವರದಲ್ಲಿ ನಿನ್ನ ಮೌನ ಕಂಡೆ,
ಹೊಂಗಿರಣಗಳ ಬೆಳಕಿನಲ್ಲಿ ನಿನ್ನ ನಗುವ ಕಂಡೆ,
ಎಳೆ ಬಳ್ಳಿಯ ಹೊಯ್ದಾಟದಲ್ಲಿ ನಿನ್ನ ನಡಿಗೆಯ ಕಂಡೆ,
ಸೋನೆ ಮಳೆಯಂತೆ ಸುರಿದ ನಿನ್ನ ಪ್ರೀತಿಯಲ್ಲಿ,
ನನ್ನ ಹೃದಯವ ನೆನೆಸಿಕೊಂಡೆ,ಸಾಗರದಂಥ ನನ್ನ ಮನಸಿನ ಭಾವನೆಗಳ ನೀ ಹಂಚಿಕೊಂಡೆ..........
ಇನ್ನು ಕಾಯಿಸಬೇಡ ನನ್ನ, ಕಪ್ಪೆಚಿಪ್ಪಿನ ಮುತ್ತಂತೆ,
ಕಣ್ಣೀರ ಕಡಲಲ್ಲಿ ತೇಲುವ ಬಿಂಬದಂತೆ ಕಾಯುವೆ ನಿನ್ನ,
ಇಂತಿ ನಿನ್ನ ಪ್ರೀತಿಯ ...
ಕಂಪನ
No comments:
Post a Comment