Tuesday, 23 September 2008

ಮುಂಜಾನೆಯ ಮಬ್ಬಿನಲಿ

ಮುಂಜಾನೆಯ ಮಬ್ಬಿನಲಿ,ಚಿಲಿಪಿಲಿ ಸದ್ದಿನಲ್ಲಿ,
ಪ್ರಥಮ ಉಷಾ ಕಿರಣವೊಂದು ನಿನ್ನ ಸುಂದರ ಮೊಗವನ್ನು ಚುಂಬಿಸಿದಾಗ,
ದೂರದ ಹಿಮ ಶೃಂಗದಿಂದ ಹಾರಿ ಬಂದ ಮಂಜಿನ ಹನಿಯೊಂದು ನಿನ್ನನು ಸ್ಪರ್ಶಿಸಿದಾಗ,
ತೆರೆದ ನಿನ್ನ ಸುಂದರ ನಯನಗಳ ಕಾಂತಿಗೆ,
ಆ ರವಿಯು ಮೋಡದ ಪರದೆ ಎಳೆದುಕೊಂಡ,ಆ ಚಂದ್ರಮ ಕೂಡ ನಾಚಿ ನೀರಾದ,
ನಿನ್ನ ಮುದ್ದಾದ ಅಧರಗಳಿಂದ ಹೊರಬಂದ ಮುದ್ದಾದ ಮಾತು ಕೇಳಿ,
ಸ್ವರಗಳು ಸುಮ್ಮನಾಗಿ, ಪದಗಳು ಪೆಚ್ಚಾದವು,
ಕೋಗಿಲೆಯೊಂದು ಹಾಡುವುದನ್ನೇ ಮರೆಯಿತು,
ನೀ ನಡೆವಾಗ ಬಂದ ಗೆಜ್ಜೆಯ ನಾದಕ್ಕೆ,ಸಂಗೀತವು ನಿಶ್ಯಬ್ದವಾದವು,
ನವಿಲೊಂದು ನಾಟ್ಯವನ್ನೇ ನಿಲ್ಲಿಸಿತು,
ನಿನ್ನ ಮಧುರ ಸ್ಪರ್ಶಕ್ಕೆ ಗುಲಾಬಿ ಅರಳಿತು,
ಅರಳಿದ ಗುಲಾಬಿಯಿಂದ ಮಧುವನ್ನು ಹೀರಿದ ದುಂಬಿಯೊಂದು,
ನಿನ್ನ ಮಧುರವಾದ ಅಧರವನ್ನು ಮತ್ತೆ ಮತ್ತೆ ಚುಂಬಿಸಿತು,
ದಿನ ಬೆಳಗೋ ಆ ಸೂರ್ಯನ ಹೆಜ್ಜೆಯಲಿ,ಜೇನಿನಂತೆ ನಿನ್ನ ಬಾಳು ಸಿಹಿಯಾಗಿರಲಿ,
ಇಂತಿ ನಿನ್ನ ಪ್ರೀತಿಯ ...
ಕಂಪನ

No comments: