ಮನದ ನೀಲಾಕಾಶದಲ್ಲಿ ಹುಣ್ಣಿಮೆಯ ಚಂದ್ರನಂತೆ ಬಂದ ನಿನ್ನ ನೆನಪು,
ಎದೆಯ ಕಾರ್ಮುಗಿಲಲ್ಲಿ ಕನಸುಗಳ ಬೆಳಕು ಚೆಲ್ಲಿದ ನಿನ್ನ ಕಂಗಳ ನೆನಪು,
ನಿದ್ರೆಯಲ್ಲೂ ಸಾವಿರ ಭಾವಗಳ ಕೆದಕುವ ನಿನ್ನ ಮುದ್ದಾದ ಮಾತಿನ ನೆನಪು,
ರವಿ ಉದಯಿಸುವ ಮುನ್ನ ನನ್ನೆಬ್ಬಿಸಿದ ನಿನ್ನ ಕೈಬಳೆ ಸದ್ದಿನ ನೆನಪು,
ನೀನಿಲ್ಲದಿದ್ದರು ಹುಡುಕುವಂತೆ ಮಾಡಿದ ನಿನ್ನ ಕಾಲ್ಗೆಜ್ಜೆಯ ನೆನಪು,
ಕೋಲ್ಮಿಂಚಿನಂತೆ ಕೋರೈಸಿದ ನಿನ್ನ ಕೆಂದುಟಿಯಂಚಿನ ನಗೆಯ ನೆನಪು,
ಬೆಳ್ಳಿ ಚುಕ್ಕಿಯಂತೆ ಮಿನುಗುತ್ತಿರುವ ನಿನ್ನ ಮೂಗುತಿಯ ನೆನಪು,
ಒಂದು ಸುಂದರ ಸಂಜೆ ನೀನಿತ್ತ ಚುಂಬನದ ನೆನಪು,
ಮುಸುಕು ಹೊದ್ದು ಮಲಗಿದ ಸಾಗರದ ತೀರಕ್ಕೆ ಅಲೆಗಳು ಮುತ್ತಿಡುವಂತೆ,
ನಿನ್ನ ನೆನಪುಗಳು ನನ್ನ ಮುತ್ತುತ್ತಿವೆ ಗೆಳತಿ,
ಇಂತಿ ನಿನ್ನ ಪ್ರೀತಿಯ ...
ಕಂಪನ
No comments:
Post a Comment