ಉಲಿದಾಗ ಪದಗಳು ನಾಚಿದ್ದು ನಿನ್ನಿಂದಲೇ,
ನಡೆವಾಗ ತಂಗಾಳಿ ನಿಂತಿದ್ದು ನಿನ್ನಿಂದಲೇ,
ನಕ್ಕಾಗ ಬೆಳದಿಂಗಳು ನಾಚಿತು ನಿನ್ನಿಂದಲೇ,
ಬಿಸಿ ಸ್ಪರ್ಶಕ್ಕೆ ಇಬ್ಬನಿ ಕರಗಿತು ನಿನ್ನಿಂದಲೇ,
ಮಿಡಿಯುವ ನನ್ನ ಹೃದಯ ಕಂಪಿಸಿತು ನಿನ್ನಿಂದಲೇ,
ಭಾವನೆಗಳು ಇಂಚರವಾಗಿ ಅಲೆಗಳಾಗಿದ್ದು ನಿನ್ನಿಂದಲೇ,
ಕೊಲ್ಮಿಂಚನು ಮರೆ ಮಾಚಿದ ಕಣ್ಣೋಟವು ನಿನ್ನಿಂದಲೇ,
ಮಲ್ಲಿಗೆ ಮೊಗ್ಗು ಅರಳಿದ್ದು ನಿನ್ನ ತುಟಿಯಂಚಿನ ನಗೆಯಿಂದಲೇ,
ಕುಂಚವೆ ನಾಚುವ ಅಂದವು ನಿನ್ನಿಂದಲೇ,
ಸೌಂದರ್ಯಕೆ ಸೋತು ನಾ ಕವಿಯಾದೆ ನಿನ್ನಿಂದಲೇ,ನಿನ್ನಿಂದಲೇ .... ನಿನ್ನಿಂದಲೇ ....
ಪ್ರೀತಿಯ ಇಂಪನಕೆ ಪ್ರೇಮದ ಕಾಣಿಕೆ ನನ್ನ ಹೃದಯದಿಂದಲೇ,
ಇಂತಿ ನಿನ್ನ ಪ್ರೀತಿಯ...
ಕಂಪನ
No comments:
Post a Comment