Tuesday, 23 September 2008

ಪಯಣ....

ನಿನ್ನದೇ ಕನಸಿನೊಂದಿಗೆ ಮಾಡಿದೆ ಪಯಣ,
ದೂರ ಹೋದರು ಹತ್ತಿರವಾದ ನಿನ್ನ ನೆನಪುಗಳ ಚುಂಬನ,
ನೋಡಿದಸ್ಟು ದೂರ ನಿನ್ನದೇ ಬಿಂಬ ಕಂಡೆಯಾ,
ಆ ಬಿಂಬದಲ್ಲಿ ಕಂಡೆ ಮುಂಜಾನೆಯ ಮಂಜಿನ ತೆರೆಯ,
ತೆರೆ ಸರಿಸಿ ಇಣುಕಿ ನೋಡಿದ ರವಿಯ,
ಕಾನನವೇ ಮೈವೆತ್ತುಕೊಂಡ ಗಿರಿಯ,
ಗಿರಿಯಿಳಿದು ಬಂದ ತಿಳಿನೀರ ಝರಿಯ,
ಬಳ್ಳಿಯೊಳಗೆ ಅರಳಿದ ಹೂವಿನ ನಗೆಯ, ಬಾನಾಡಿಯ ಚಿಲಿಪಿಲಿಯ,
ತಂಗಾಳಿಯೊಂದಿಗೆ ತೂರಿ ಬಂದು ಮೊಗಕೆ ಮುತ್ತಿಡುವ ಇಬ್ಬನಿಯ,
ಪದೇ ಪದೇ ನೆನೆಸಿಕೊಂಡೆ ನನ್ನ ತುಂಟಿಯ,
ತಂಟೆ ಮಾಡಿ ಹೃದಯ ಸೇರಿದ ಚೋರಿಯ ,
ಕ್ಷಣ ಕೂಡ ಬಿಡದೆ ನನಗನಿಸಿತು ಪ್ರಿಯ ,ನೀನಿರಬೇಕು ನನ್ನ ಸನಿಹ ಸನಿಹ ,
ಇಂತಿ ನಿನ್ನ ಪ್ರೀತಿಯ...
ಕಂಪನ

ಬಯಸಿ ಬಯಸಿ ಬರೆದ ನನ್ನ ಓಲೆ......

ಮಳೆ ನಿಂತರೂ ನಿಲ್ಲದು ನಿನ್ನ ನೆನಪುಗಳ ಸರಮಾಲೆ,
ಮಳೆಯಲ್ಲೇ ಕುಳಿತು ಬರೆದೆ ನಿನಗೊಂದು ಪ್ರೇಮದ ಓಲೆ,
ತೊಯ್ದ ಹಾಳೆಯ ಮೇಲೆ ಪದಪುಂಜಗಳ ಸಾಲೆ,
ನಿನ್ನ ಸ್ಪರ್ಶಿಸುವ ಗಾಳಿ ನನ್ನ ಉಸಿರಾಗಬೇಕೆಂದು,
ಮಳೆಬಿಲ್ಲಿನ ಮೇಲಿಂದ ಜಾರಿ ಬಂದು ನಿನ್ನ ಮೊಗವ ಮುತ್ತಿಕ್ಕುವ ಹನಿಯಾಗಬೇಕೆಂದು,
ನಿನ್ನ ತುಂಬು ಕಂಗಳಿಗೆ ನಾ ರೆಪ್ಪೆಯ ಚಾಮರವಾಗಬೇಕೆಂದು,
ಹುಣ್ಣಿಮೆಯಲ್ಲಿ ನಿನ್ನ ಚುಂಬಿಸುವ ಬೆಳದಿಂಗಳಾಗಬೇಕೆಂದು,
ನಿನ್ನ ಸ ರೀ ಗ ಮ ದ ಸೆರೆಯಲ್ಲಿ ನಾ ಬಂಧಿಯಾಗಬೇಕೆಂದು,
ನೀ ಬಯಸಿದ ಹೂವಿನ ಮಕರಂದವ ಹೀರುವ ದುಂಬಿಯಾಗಬೇಕೆಂದು,
ನಿನ್ನ ಪುಟ್ಟ ಹೃದಯಕ್ಕೊಂದು ಗೂಡಾಗಬೇಕೆಂದು,
ನೀ ಬರೆವ ಪತ್ರದ ಕೊನೆಯ ಸಾಲಾದರೂ ನಾನಾಗಬೇಕೆಂದು,
ಹೇ ಗೆಳತಿ,ಬಯಸಿ ಬಯಸಿ ಬರೆದ ನನ್ನ ಓಲೆಗೆ, ಉತ್ತರ ಎಂದು??????
ಇಂತಿ ನಿನ್ನ ಪ್ರೀತಿಯ...
ಕಂಪನ

ಪ್ರಶ್ನೆ.....???

ಮನಸಿನ ಸಾಗರದಲ್ಲಿ ಒಲವಿನ ಅಲೆ ಎಬ್ಬಿಸಿದೆ,
ಕಣ್ಣು ಮುಚ್ಚಿದರೂ ಕಾಡುವಂತೆ ನೀ ಸುಳಿದಾಡಿದೆ,
ಮರೆಯಲಾಗದ ಮಾತುಗಳ ಪದೇ ಪದೇ ಪಿಸುಗುಟ್ಟಿದೆ,
ಸ್ನೇಹದ ಕೈ ಹಿಡಿದು,ಪ್ರೀತಿಯ ಹಾದಿ ತುಳಿಸಿದೆ,
ನನ್ನಲಿ ನೀನಾದೆ, ನಿನ್ನಲಿ ನಾ ....ಪ್ರಶ್ನೆಯಾಗಿಯೇ ಉಳಿದೆ?????????
ಇಂತಿ ನಿನ್ನ ಪ್ರೀತಿಯ...
ಕಂಪನ

ನೀಲಾಕಾಶದಲ್ಲಿ ಚುಕ್ಕಿಗಳ ಚಿತ್ತಾರದ ನಡುವೆ,,,

ನೀಲಾಕಾಶದಲ್ಲಿ ಚುಕ್ಕಿಗಳ ಚಿತ್ತಾರದ ನಡುವೆ ಚಂದ್ರಮನ ತೊಟ್ಟಿಲು,
ಸುಂದರ ಕನಸುಗಳ ಕಣ್ತುಂಬಿಕೊಂಡು ನೀ ಮಲಗಿರಲು,
ನಾ ಬೇಡಿದೆ ಹಕ್ಕಿಗಳ ಸುಮ್ಮನಿರಲು,
ಕೇಳಿದೆ ತಂಗಾಳಿಯ ಮೆಲ್ಲನೆ ಬೀಸಲು,
ದೇವರ ಕೈ ಜಾರಿ ಭೂಮಿಗೆ ಬಂದ ಅಪರೂಪದ ಸಂಗಾತಿ ನೀನು,
ನನ್ನ ಕೈಗೆ ಕೈ ಸೇರಿಸಿ ಪ್ರೀತಿ ಮಾತು ಕಲಿಸಿದ ಗೆಳತಿ ನೀನು,
ಕಲ್ಲು ಕರಗುವಂತ ನಿನ್ನ ಮಾತು ಕೇಳಿ ಜಗವ ಮರೆತೇ ನಾನು,
ನಿನಗಾಗಿಯೇ ನಾ ಕಟ್ಟಿದ ಉಸಿರಿನ ಅರಮನೆಯಲ್ಲಿ,
ನನ್ನ ಉಸಿರಂತೆ ನಿನ್ನ ಬೆಚ್ಚಗಿಡುವೆ,
ಇಂತಿ ನಿನ್ನ ಪ್ರೀತಿಯ...
ಕಂಪನ

ನಿನ್ನ ಕಂಡ ಕ್ಷಣ ಹೊತ್ತು......

ನಿನ್ನ ಕಂಡ ಕ್ಷಣ ಹೊತ್ತು,ನನ್ನ ಹೃದಯ ಮಾತಾಡಿತು,
ಎದೆಯ ಗೂಡಲ್ಲಿದ್ದ ಒಂದು ಮುತ್ತಿನಂತ ಮಾತು,
ತುಟಿಯಂಚಿಗೆ ಬಂದು ತಡವರಿಸಿ ನಿಂತಿತು,
ಮನಸಿನ ಆಲಾಪ ಹೊರಟಿತು ಪ್ರೇಮದ ಸಂಗೀತ ಕಛೇರಿಯಲ್ಲಿ,
ಹಾಲು ಬೆಳದಿಂಗಳ ರಾತ್ರಿಯಲ್ಲಿ,ನಿನ್ನದೇ ನೆನಪಿನಲ್ಲಿ,
ನಾ ಬರೆದ ಕವನದಲ್ಲಿ ಪದವು ನೀನಾಗಿದ್ದೆ,
ಹಾಡಲು ಮರೆತ ಹಾಡಿನಲ್ಲಿ ರಾಗವಾಗಿ ನೀ ಉಳಿದೆ,
ಭೂಮಿ ಭಾನು ಬೆಸೆದ ಕಾಮನಬಿಲ್ಲಾದೆ ನೀನು,
ಮಳೆ ಹನಿಯ ಹಾದು ಬಂದು ಬಣ್ಣ ಕೊಡುವ ಕಿರಣ ನಾನು,
ಮುಂಗಾರಿನ ಮೋಡವೊಂದು ಸಹ್ಯಾದ್ರಿಯ ದಾಟಿ ಬಂದು ಸುರಿಸಿದ ಮುತ್ತಿನ ಹನಿಯಂತ ನಿನ್ನ ನಗುವನ್ನ,
ಹೃದಯದ ಕೋಣೆಯಲ್ಲಿ, ಬೆಚ್ಚನೆ ಮುತ್ತನಿಟ್ಟು, ಕಾಪಾಡುವೆ ಚಿನ್ನ,
ಇಂತಿ ನಿನ್ನ ಪ್ರೀತಿಯ...
ಕಂಪನ

ಹೂಮನಗಳ ....

ಹೂಮನಗಳ ಮಾಡಿ ಪ್ರೀತಿಯ ಮಧು ತುಂಬಿದವಳೆ,
ನಿನ್ನ ರಾಗದ ಕಲರವದಲ್ಲಿ ಹೃದಯದ ಅಲೆ ಎಬ್ಬಿಸಿದವಳೇ,
ನಿನ್ನ ಗೆಜ್ಜೆ ಸದ್ದಿನಲ್ಲಿ ನನ್ನ ಮಾತು ನಿಲ್ಲಿಸಿದವಳೇ,
ಕೈ ಬಳೆ ನಾದದಲ್ಲಿ ಮಾತನಾಡುವವಳೇ,
ನನ್ನೆದೆ ಹಾಳೆಯಲ್ಲಿ ನಿನ್ನ ಕಿರುಬೆರಳ ಕುಂಚದಿಂದ ಚಿತ್ತಾರ ಬಿಡಿಸಿದವಳೇ,
ಕೆಂದುಟಿಯ ಕೊನೆಯಲ್ಲಿ ಮಿಂಚಿನಂತ ನಗೆಯ ಬೀರಿ ಮನಸು ಗೆದ್ದವಳೇ,
ಕೋರೈಸುವ ಕಣ್ಣೋಟದಿಂದ ನನ್ನ ಉಸಿರಾಟ ನಿಲ್ಲಿಸಿದವಳೇ,
ನಾಚಿದ ನಿನ್ನ ಕೆನ್ನೆಯ ರಂಗಿನಲ್ಲಿ ನನ್ನೇ ಮರೆಸಿದವಳೇ,
ಸ್ವಾತಿ ಮುತ್ತಿನ ಸೋನೆ ಮಳೆಯಂತೆ ಸುರಿದ ನಿನ್ನ ಪ್ರೀತಿಯಲ್ಲಿ....
ನಾ ತೇಲಿ ಹೋಗುವ ಮುನ್ನ,ನನ್ನೆದೆಯ ಗೂಡನು ಸೇರು ಚಿನ್ನ,
ಇಂತಿ ನಿನ್ನ ಪ್ರೀತಿಯ...
ಕಂಪನ

ಸ್ನೇಹ........

ಸ್ನೇಹಲೋಕದ ಸ್ನೇಹಿತರಿಗೆ,ಸ್ನೇಹಿತೆಯರಿಗೆ ಸ್ನೇಹದ ದಿನದ ಶುಭಾಶಯಗಳು.....
ಆಗಸದಸ್ಟು ವಿಶಾಲ, ಕಡಲಸ್ಟು ಆಳ ಈ ಸ್ನೇಹ,
ಹಿಮಾಲಯದಸ್ಟು ಎತ್ತರ ನಮ್ಮ ಸ್ನೇಹ,
ಬರಡಾದ ಬದುಕಿಗೆ ಭಾವನೆಗಳ ಚಿಲುಮೆ ಈ ಸ್ನೇಹ,
ಸೋತ ಮನಸಿಗೆ ಸ್ಪೂರ್ತಿ ಈ ಸ್ನೇಹ,
ನಡೆದಸ್ಟು ದೂರ ಜೊತೆಗಿರುವುದೀ ಸ್ನೇಹ,
ಕೊನೆಯೆಂಬುದ ಕಾಣದ ಈ ಸ್ನೇಹ,
ಪದಗಳಲಿ ಬರೆಯಲಾಗದ, ಮಾತಿನಲ್ಲಿ ಹೇಳಲಾಗದ ಈ ಸ್ನೇಹ,
ತನಗಾಗಿ, ತನ್ನವರಿಗಾಗಿ, ತನು ಮನವ ಧಾರೆಯೆರೆಯುವ ಸ್ನೇಹ,
ಅಡೆ ತಡೆ ಇಲ್ಲದೆ, ಕೊನೆ ಮೊದಲಿಲ್ಲದೆ, ಹಸ್ತ ಚಾಚಿದೆ ಈ ಸ್ನೇಹ,
ಆದಿಯನ್ನು ಮಾತ್ರ ಕಂಡು ಅಂತ್ಯವನ್ನೇ ಕಾಣದ ಈ ಸ್ನೇಹ,
ಸ್ನೇಹದ ಕಡಲಲ್ಲಿ, ಭಾವನೆಗಳ ದೋಣಿಯೇರಿ,ಕವನಗಳ ಬಲೆಯ ಬೀಸಿ,
ಪ್ರೀತಿಯ ಅಲೆಗಳ ಮೇಲೆ,ಸ್ನೇಹಿತರ ಬರಸೆಳೆಯುವ,
ಇಂತಿ ನಿಮ್ಮ ಪ್ರೀತಿಯ...
ಕಂಪನ

ಚುಮು ಚುಮು ಚಳಿಯಲ್ಲಿ ..........

ಮುಂಜಾನೆಯ ಚುಮು ಚುಮು ಚಳಿಯಲ್ಲಿ ನಿನ್ನ ಬೆಚ್ಚನೆ ಸ್ಪರ್ಶ ಕಂಡೆ,
ಮುಂಗುರುಳಿಗೆ ಮುತ್ತಿಡುವ ತಂಗಾಳಿಯಲ್ಲಿ ನಿನ್ನ ಮೊಗವ ಕಂಡೆ,
ಸಂಗೀತದ ಅಲೆಗಳ ಮೇಲೆ ತೇಲಿ ಬಂದ ಸುಪ್ರಬಾತದ ಸ್ವರದಲ್ಲಿ ನಿನ್ನ ಮೌನ ಕಂಡೆ,
ಹೊಂಗಿರಣಗಳ ಬೆಳಕಿನಲ್ಲಿ ನಿನ್ನ ನಗುವ ಕಂಡೆ,
ಎಳೆ ಬಳ್ಳಿಯ ಹೊಯ್ದಾಟದಲ್ಲಿ ನಿನ್ನ ನಡಿಗೆಯ ಕಂಡೆ,
ಸೋನೆ ಮಳೆಯಂತೆ ಸುರಿದ ನಿನ್ನ ಪ್ರೀತಿಯಲ್ಲಿ,
ನನ್ನ ಹೃದಯವ ನೆನೆಸಿಕೊಂಡೆ,ಸಾಗರದಂಥ ನನ್ನ ಮನಸಿನ ಭಾವನೆಗಳ ನೀ ಹಂಚಿಕೊಂಡೆ..........
ಇನ್ನು ಕಾಯಿಸಬೇಡ ನನ್ನ, ಕಪ್ಪೆಚಿಪ್ಪಿನ ಮುತ್ತಂತೆ,
ಕಣ್ಣೀರ ಕಡಲಲ್ಲಿ ತೇಲುವ ಬಿಂಬದಂತೆ ಕಾಯುವೆ ನಿನ್ನ,
ಇಂತಿ ನಿನ್ನ ಪ್ರೀತಿಯ ...
ಕಂಪನ

ಚುಮು ಚುಮು ಚಳಿಯಲ್ಲಿ ..........

ಮುಂಜಾನೆಯ ಚುಮು ಚುಮು ಚಳಿಯಲ್ಲಿ ನಿನ್ನ ಬೆಚ್ಚನೆ ಸ್ಪರ್ಶ ಕಂಡೆ,
ಮುಂಗುರುಳಿಗೆ ಮುತ್ತಿಡುವ ತಂಗಾಳಿಯಲ್ಲಿ ನಿನ್ನ ಮೊಗವ ಕಂಡೆ,
ಸಂಗೀತದ ಅಲೆಗಳ ಮೇಲೆ ತೇಲಿ ಬಂದ ಸುಪ್ರಬಾತದ ಸ್ವರದಲ್ಲಿ ನಿನ್ನ ಮೌನ ಕಂಡೆ,
ಹೊಂಗಿರಣಗಳ ಬೆಳಕಿನಲ್ಲಿ ನಿನ್ನ ನಗುವ ಕಂಡೆ,
ಎಳೆ ಬಳ್ಳಿಯ ಹೊಯ್ದಾಟದಲ್ಲಿ ನಿನ್ನ ನಡಿಗೆಯ ಕಂಡೆ,
ಸೋನೆ ಮಳೆಯಂತೆ ಸುರಿದ ನಿನ್ನ ಪ್ರೀತಿಯಲ್ಲಿ,
ನನ್ನ ಹೃದಯವ ನೆನೆಸಿಕೊಂಡೆ,ಸಾಗರದಂಥ ನನ್ನ ಮನಸಿನ ಭಾವನೆಗಳ ನೀ ಹಂಚಿಕೊಂಡೆ..........
ಇನ್ನು ಕಾಯಿಸಬೇಡ ನನ್ನ, ಕಪ್ಪೆಚಿಪ್ಪಿನ ಮುತ್ತಂತೆ,
ಕಣ್ಣೀರ ಕಡಲಲ್ಲಿ ತೇಲುವ ಬಿಂಬದಂತೆ ಕಾಯುವೆ ನಿನ್ನ,
ಇಂತಿ ನಿನ್ನ ಪ್ರೀತಿಯ ...
ಕಂಪನ

ನನ್ನವಳು.....

ನನ್ನವಳು.....
ಮುಗ್ದ ಮನಸಿನ ಮುದ್ದಾದ ಚೆಲುವೆ ಅವಳು,
ಅಂಬರದ ತುಂಬಾ ಮಿಂಚುವ ತಾರೆ ಅವಳು,
ಹುಣ್ಣಿಮೆಯಲ್ಲಿ ಚೆಲ್ಲಿದ ಬೆಳದಿಂಗಳು ಅವಳೇ,
ನಾ ಹಿಡಿವ ಕುಂಚ ಅವಳು, ಚಿತ್ರ ಕೂಡ ಅವಳು,
ನನ್ನ ಹಾಡಿಗೆ ಸ್ವರ ಅವಳು, ಲಹರಿ ಅವಳೇ,
ಚಿಗುರೆಲೆಯ ಮೇಲಿನ ಇಬ್ಬನಿಯಂಥವಳು,
ಮೈ ಮನವ ಮುತ್ತುವ ತಂಗಾಳಿ ಅವಳು,
ನಕ್ಕರೆ ಮಲ್ಲಿಗೆಯ ಹೂವಂತೆ, ನಡೆದರೆ ಹರಿಯುವ ನದಿಯಂತೆ ಅವಳು,
ನನ್ನ ಕಂಗಳ ರೆಪ್ಪೆ ಅವಳು, ಕಂಬನಿಯಲ್ಲಿ ಹೊಯ್ದಾಡುವ ಬಿಂಬ ಅವಳೇ,
ಇಂಥ ನನ್ನವಳು ... ಮಾತನಾಡದೆ ಮೌನವಾದಳು....
ಇನ್ನು ಕಾಯಿಸಬೇಡ ಚಿನ್ನ, ಗೂಡು ಸೇರುವ ಗುಬ್ಬಿಯ ಹಾಗೆ ಬೇಗ ಬಂದು ಸೇರು ನನ್ನ,
ಇಂತಿ ನಿನ್ನ ಪ್ರೀತಿಯ...
ಕಂಪನ

ನಿನ್ನಿಂದಲೇ......

ಉಲಿದಾಗ ಪದಗಳು ನಾಚಿದ್ದು ನಿನ್ನಿಂದಲೇ,
ನಡೆವಾಗ ತಂಗಾಳಿ ನಿಂತಿದ್ದು ನಿನ್ನಿಂದಲೇ,
ನಕ್ಕಾಗ ಬೆಳದಿಂಗಳು ನಾಚಿತು ನಿನ್ನಿಂದಲೇ,
ಬಿಸಿ ಸ್ಪರ್ಶಕ್ಕೆ ಇಬ್ಬನಿ ಕರಗಿತು ನಿನ್ನಿಂದಲೇ,
ಮಿಡಿಯುವ ನನ್ನ ಹೃದಯ ಕಂಪಿಸಿತು ನಿನ್ನಿಂದಲೇ,
ಭಾವನೆಗಳು ಇಂಚರವಾಗಿ ಅಲೆಗಳಾಗಿದ್ದು ನಿನ್ನಿಂದಲೇ,
ಕೊಲ್ಮಿಂಚನು ಮರೆ ಮಾಚಿದ ಕಣ್ಣೋಟವು ನಿನ್ನಿಂದಲೇ,
ಮಲ್ಲಿಗೆ ಮೊಗ್ಗು ಅರಳಿದ್ದು ನಿನ್ನ ತುಟಿಯಂಚಿನ ನಗೆಯಿಂದಲೇ,
ಕುಂಚವೆ ನಾಚುವ ಅಂದವು ನಿನ್ನಿಂದಲೇ,
ಸೌಂದರ್ಯಕೆ ಸೋತು ನಾ ಕವಿಯಾದೆ ನಿನ್ನಿಂದಲೇ,ನಿನ್ನಿಂದಲೇ .... ನಿನ್ನಿಂದಲೇ ....
ಪ್ರೀತಿಯ ಇಂಪನಕೆ ಪ್ರೇಮದ ಕಾಣಿಕೆ ನನ್ನ ಹೃದಯದಿಂದಲೇ,
ಇಂತಿ ನಿನ್ನ ಪ್ರೀತಿಯ...
ಕಂಪನ

ಮಿಂಚಾಗಿ ಬಂದು ಮರೆಯಾದ ಮೌನರಾಗವೇ,

ಮಿಂಚಾಗಿ ಬಂದು ಮರೆಯಾದ ಮೌನರಾಗವೇ,
ನನ್ನ ಹೃದಯ ವೀಣೆಯಲ್ಲಿ ನೀ ಮೀಟಿದ ಪ್ರೀತಿಗೆ ನಾನು ಕವಿಯಾದೆ,
ನನ್ನ ಕಾವ್ಯದ ಸಾಲುಗಳ ಇಂಪನ ನೀನಾದೆ,
ಆ ಇಂಪನಕೆ ಸಂಗೀತದ ಕಂಪನ ನಾನಾದೆ,
ನನ್ನ ಕವನಗಳಿಗೆ ಪಲ್ಲವಿ ನೀನಾದೆ, ಚರಣ ನಾನಾದೆ,
ತಾಳ ನೀನಾದರೆ ರಾಗ ನಾನಾದೆ,
ಹುಣ್ಣಿಮೆಯ ಚಂದ್ರಮ ನೀನಾದೆ, ನೆಗೆದು ಮುತ್ತಿಕ್ಕುವ ಅಲೆಯು ನಾನಾದೆ,
ಇಳಿದರೆ ಧಾರೆ ಆಗುವ ಹಿಮವು ನೀನಾದೆ, ಹಿಮ ಕರಗಿಸುವ ಬಿಸಿಲು ನಾನಾದೆ,
ಪ್ರಣಯ ಕಾಲದಲ್ಲಿ ಅರಳಿದ ಸುಮವು ನೀನಾದೆ,
ಮಕರಂದ ಹೀರುವ ದುಂಬಿ ನಾನಾದೆ,
ತಂಗಾಳಿಗೆ ಮೈಯೊಡ್ಡಿ ಮಲಗಿರುವ ಕಿನಾರೆ ನೀನಾದೆ,
ನಿನ್ನ ಕಾವಲು ಕಾಯುವ ಕಡಲು ನಾನಾದೆ,
ನಾ ಸಾಗುವ ಹಾದಿಯಲ್ಲಿ ಮರೀಚಿಕೆಯು ನೀನಾದೆ,
ನಿನ್ನ ಹಿಡಿಯಲಾಗದೆ ಸೋತು ಸೊರಗಿದೆ,
PLEASE ಇನ್ನು ಕಾಡಿಸಬೇಡ ಚಿನ್ನ, ಬೇಗ ಬಂದು ಸೇರು ನನ್ನ,
ಇಂತಿ ನಿನ್ನ ಪ್ರೀತಿಯ...
ಕಂಪನ

ದಾವಣಿ ಧರಿಸಿ

ದಾವಣಿ ಧರಿಸಿ ಮಲ್ಲಿಗೆ ಮುಡಿದು ನಡೆದು ಬಂದ ನಿನ್ನ ಅಂದ,
ಪದೇ ಪದೇ ನೆರಿಗೆಯ ಮೇಲೆ ಕೈಯಾಡುವ ನಿನ್ನ ಬೆರಳುಗಳ ಚಂದ,
ಆಳಕ್ಕೆ ಜಾರಿ ಬಿದ್ದ ಜೋಗದಂತೆ ನಿನ್ನ ಜಡೆ,
ದಾಳಿಂಬೆ ಬೀಜದಂತೆ ಜೋಡಿಸಿಟ್ಟ ಹಲ್ಲುಗಳು,
ಅರಳಿದ ಕೆಂಪು ಗುಲಾಬಿ ಪಕಳೆಯಂತ ನಿನ್ನ ಅಧರಗಳು,
ಮುಂಜಾನೆಯಲಿ ರಂಗೇರಿದ ಮೂಡಣದಂತೆ ನಿನ್ನ ಮೈಬಣ್ಣ,
ನಡೆವಾಗ ಆಗುಂಬೆಯ ಮೇಲಿಂದ ಹರಿದು ಬಂದ ತಿಳಿ ನೀರ ಜರಿ,
ಕೊಡಚಾದ್ರಿಯ ತಂಗಾಳಿಯಂತೆ ನಿನ್ನ ಸ್ಪರ್ಶ,
ನಿನ್ನ ಸಾಗರದಂತ ಕಂಗಳಲಿ ಸಾವಿರ ಕನಸುಗಳ ಹಾಯಿದೋಣಿ,
ಮಾಘ ಮಾಸದ ಗಾಳಿಗೆ ಪಟಪಟ ಹಾರಿದೆ ನಿನ್ನ ದಾವಣಿ,
ನಕ್ಕಾಗ ಅಂಬರಕ್ಕೆ ಮುತ್ತಿಟ್ಟ ಮಿನುಗೋ ತಾರೆಗಳು,
ಮನಸಿನ ಸರೋವರದಲ್ಲಿ ಕಲ್ಲೆಸೆದು ಅಲೆಯೆಬ್ಬಿಸಿದ ನಿನ್ನ ಮಾತುಗಳು,
ಉಸಿರಿನ ಸಂಗೀತದ ಜೊತೆಗೆ ನೀ ಹಾಡಿದ ಮೌನರಾಗದ ಸಾಲುಗಳು,
ನಿನ್ನೆಲ್ಲ ಸೌಂದರ್ಯವನ್ನು ಕಣ್ತುಂಬಿಕೊಂಡ ನನ್ನ ಹೃದಯ,
ವಸಂತ ಮಾಸದಲ್ಲಿ ಹಿತವಾಗಿ ಚಲಿಸುವ ಬೆಳ್ಳಿ ಮೋಡ,
ಇಂತಿ ನಿನ್ನ ಪ್ರೀತಿಯ...
ಕಂಪನ

ಮೌನದ ಮಾತಿನ ಇಂಪನ

ಹೇ ಮೌನದ ಮಾತಿನ ಇಂಪನ,
ನಿನಗಾಗಿ ನನ್ನದೊಂದು ಪುಟ್ಟ ಕವನ,
ನನ್ನೆದೆಯಲಿ ನಿನಗಾಗಿ ಬಚ್ಚಿಟ್ಟ ಎಸ್ಟೋ ಮಾತುಗಳು,
ನಿನ್ನೊಂದಿಗೆ ಹೇಳದೆ ಕೂಡಿಟ್ಟ ಎಸ್ಟೋ ಕವನಗಳು,
ಕನಸಲ್ಲಿ ಬಂದು ನೀ ಹೇಳಿದ ಸುಂದರ ಕತೆಗಳು,
ಬಿಸಿಯುಸಿರು ಆರುವ ಮುನ್ನ ನವಿರಾಗಿ ಸೋಕಿದ ನಿನ್ನ ಮುಂಗುರುಳು,
ಪದಗಳನ್ನು ತಡೆದು ನಡುಗುತ್ತಿರುವ ನಿನ್ನ ಅಧರಗಳು,
ಕೋಲ್ಮಿಂಚಿನಂತೆ ಮಿಂಚುತ್ತಿರುವ ನಿನ್ನ ಬೊಗಸೆ ಕಂಗಳು,
ನೀ ನಕ್ಕಾಗ ನಾಚಿದ ಹುಣ್ಣಿಮೆಯ ಬೆಳದಿಂಗಳು,
ಜಡಿ ಹಿಡಿದ ಮುಂಗಾರು ಮಳೆಯಂತೆ ಕಾಡಿವೆ ನಿನ್ನ ನೆನಪುಗಳು,
WAITING FOR YOU ಗೆಳತಿ, COME SOON,
ಇಂತಿ ನಿನ್ನ ಪ್ರೀತಿಯ ...
ಕಂಪನ

ಮನದ ನೀಲಾಕಾಶದಲ್ಲಿ ಹುಣ್ಣಿಮೆಯ

ಮನದ ನೀಲಾಕಾಶದಲ್ಲಿ ಹುಣ್ಣಿಮೆಯ ಚಂದ್ರನಂತೆ ಬಂದ ನಿನ್ನ ನೆನಪು,
ಎದೆಯ ಕಾರ್ಮುಗಿಲಲ್ಲಿ ಕನಸುಗಳ ಬೆಳಕು ಚೆಲ್ಲಿದ ನಿನ್ನ ಕಂಗಳ ನೆನಪು,
ನಿದ್ರೆಯಲ್ಲೂ ಸಾವಿರ ಭಾವಗಳ ಕೆದಕುವ ನಿನ್ನ ಮುದ್ದಾದ ಮಾತಿನ ನೆನಪು,
ರವಿ ಉದಯಿಸುವ ಮುನ್ನ ನನ್ನೆಬ್ಬಿಸಿದ ನಿನ್ನ ಕೈಬಳೆ ಸದ್ದಿನ ನೆನಪು,
ನೀನಿಲ್ಲದಿದ್ದರು ಹುಡುಕುವಂತೆ ಮಾಡಿದ ನಿನ್ನ ಕಾಲ್ಗೆಜ್ಜೆಯ ನೆನಪು,
ಕೋಲ್ಮಿಂಚಿನಂತೆ ಕೋರೈಸಿದ ನಿನ್ನ ಕೆಂದುಟಿಯಂಚಿನ ನಗೆಯ ನೆನಪು,
ಬೆಳ್ಳಿ ಚುಕ್ಕಿಯಂತೆ ಮಿನುಗುತ್ತಿರುವ ನಿನ್ನ ಮೂಗುತಿಯ ನೆನಪು,
ಒಂದು ಸುಂದರ ಸಂಜೆ ನೀನಿತ್ತ ಚುಂಬನದ ನೆನಪು,
ಮುಸುಕು ಹೊದ್ದು ಮಲಗಿದ ಸಾಗರದ ತೀರಕ್ಕೆ ಅಲೆಗಳು ಮುತ್ತಿಡುವಂತೆ,
ನಿನ್ನ ನೆನಪುಗಳು ನನ್ನ ಮುತ್ತುತ್ತಿವೆ ಗೆಳತಿ,
ಇಂತಿ ನಿನ್ನ ಪ್ರೀತಿಯ ...
ಕಂಪನ

ನನ್ನ ಮನಸಿನ ಕನ್ನಡಿಯಲ್ಲಿ

ನನ್ನ ಮನಸಿನ ಕನ್ನಡಿಯಲ್ಲಿ ನಿನ್ನ ಬಿಂಬ ಅಚ್ಚಳಿಯದೆ ಉಳಿದಿದೆ,
ಹೃದಯ ಮಾತಾಡುವ ವೇಳೆ ಮಾತು ಮೌನವಾಗಿದೆ,
ನಿನ್ನ ಹಾಡಿನ ಪಲ್ಲವಿ ಕೇಳದೆ ಮನಸು ಸೊರಗಿದೆ,
ಮಂಜಿನ ಮಳೆಯಲ್ಲಿ ನೆನೆಯುವ ನಿನ್ನ ನೆನಪಾಗಿದೆ,
ಮುಸ್ಸಂಜೆ ಹೊತ್ತಲ್ಲಿ ಮುದ್ದಾದ ಮಾತಾಡುವ ಆಸೆಯಾಗಿದೆ,
ತಂಗಾಳಿಗೆ ಹಾರಾಡುವ ನಿನ್ನ ಮುಂಗುರುಳ ಹಿಂದೆ ತಳ್ಳಲು ಹಿತವಾಗಿದೆ,
ನಿನ್ನ ಅಧರದ ಜೇನಿಗೆ ಮುತ್ತಿಕ್ಕುವ ಚಿಟ್ಟೆಯ ಹಿಡಿಯಲು ಮನಸಾಗಿದೆ,
ನನ್ನ ಹೃದಯದ ಪ್ರೀತಿ ಹೂವಾಗಿ ಅರಳುವ ಸಮಯದಿ ನೀ ಬಂದು ಸೇರು ಗೆಳತಿ,
ಇಂತಿ ನಿನ್ನ ಪ್ರೀತಿಯ...
ಕಂಪನ

ಮೋಡದ ಮರೆಯಲ್ಲೊಂದು

ಮೋಡದ ಮರೆಯಲ್ಲೊಂದು ಮುದ್ದಾದ ಗೂಡು ಕಟ್ಟಿ,
ಚಂದ್ರನ ಮೇಲೆ ಕುಳಿತು ತಾರೆಗಳನ್ನು ಎಣಿಸೋಣ,
ಎಂದ ನಿನ್ನ ಸವಿಯಾದ ಮಾತು ಕೇಳಿ ನಾ ಕವಿಯಾದೆ ಗೆಳತಿ,
ಕ್ಷಣ ಕ್ಷಣಕೂ ನೆನಪಾದ ನಿನ್ನ ಹೆಸರು,ನಿನ್ನ ಹೆಸರೊಂದಿಗೆ ನಾ ಮರೆತೆ ನನ್ನ ಉಸಿರು,
ಇಂತಿ ನಿನ್ನ ಪ್ರೀತಿಯ ...
ಕಂಪನ

ನನ್ನ ಬಾಳ ತೋಟದಲಿ

ನನ್ನ ಬಾಳ ತೋಟದಲಿ ಹುಣ್ಣಿಮೆಯ ಚಂದ್ರನ ರಂಗೋಲಿ,
ನನ್ನ ಹೃದಯದಿ ನೀ ಮೀಟಿದ ಪ್ರೇಮ ತರಂಗದ ಗಾನಲಹರಿ,
ನನ್ನ ಮನಸಲಿ ನೀ ನುಡಿಸಿದ ಸ್ವರಗಳ ಸವಿ,
ನಿನ್ನ ಮೃದು ಸ್ಪರ್ಶಕೆ ನನಗಾದ ಜ್ವರದ ಬಿಸಿ,
ಎಲ್ಲವು ನೆನಪಾಗಿ ಕಾಡಿವೆ,
ಇಂತಿ ನಿನ್ನ ಪ್ರೀತಿಯ ...
ಕಂಪನ

ಸರಿ ರಾತ್ರಿಯಲ್ಲಿ ಕಹಿ

ಸರಿ ರಾತ್ರಿಯಲ್ಲಿ ಕಹಿ ನೆನಪುಗಳ ಕೆದಕುತ,
ಮುಗಿದ ದಿನಗಳ ಗುಣಗಾನ ಮಾಡುತ,
ನಾಳೆಯ ಸುಂದರ ಸ್ವಪ್ನಗಳ ಕಲ್ಪನೆಯೊಂದಿಗೆ,
ಸ್ನೇಹದ ಚಿಪ್ಪಿನಲ್ಲಿ ಪ್ರೀತಿಯ ಮುತ್ತನಿಟ್ಟಂತೆ,
ಮೆತ್ತನೆ ಹಾಸಿಗೆಯ ಮೇಲೆ ಮಲಗಿರುವ ನಿನ್ನ ಮೇಲೆ,
ಮುಂಜಾನೆ ಮಂಜಿನ ತೆರೆಯ ಸರಿಸಿ,
ಬೆಳ್ಳಿ ರಥದ ಮೇಲೆ ಬಂದ ಭಾಸ್ಕರನ ಹೊಂಗಿರಣ,
ಎಲೆಗಳ ಮೇಲಿನ ಮುತ್ತಿನಂಥ ಇಬ್ಬನಿಯ ಚುಂಬನ,
ಹಕ್ಕಿಗಳ ಇಂಪಾದ ಚಿಲಿಪಿಲಿಯ ಆಹ್ವಾನ,
ಹೊಸ ಹುರುಪಿನೊಂದಿಗೆ ಎದ್ದ ನಿನ್ನ ಮೇಲೆ ತಂಗಾಳಿಯ ಆಲಿಂಗನ,
ಆ ಸಿಹಿಗಾಳಿಗೆ ಹಾರಾಡಿದ ನಿನ್ನ ಮುಂಗುರುಳು ಕರಿಮೋಡಕ್ಕೆ ಸಮಾನ,
ಅತ್ತ ಇತ್ತ ಹುಡುಕುತ್ತಿರುವ ನಿನ್ನ ನಯನಗಳು ಹೆದರಿ ಓಡಿದ ಹರಿಣಗಳು,
ಹಾರುತ್ತಿರುವ ನಿನ್ನ ಹುಬ್ಬುಗಳು ಮುಂಗಾರು ಮಳೆಯ ಕಾಮನ ಬಿಲ್ಲು,
ನಿನ್ನ ಮುದ್ದಾದ ಮಾತುಗಳು ಕೋಗಿಲೆಗಳ ಗುಂಪಲ್ಲಿ ಹುಟ್ಟಿದ ಹಾಡುಗಳು,
ನೀನಾಡುವ ಇಂಪಾದ ಹಾಡುಗಳು ಹೂದೋಟದಲ್ಲಿ ಹಾರಾಡುವ ದುಂಬಿಯ ಜ್ಹೆಂಕಾರಗಳು,
ನಿನ್ನ ಸುಂದರ ರೂಪ ಕಾಣಲು, ನಿನ್ನ ಅಂಗೈಯನ್ನು ಸ್ಪರ್ಶಿಸಲು,
ನಿನ್ನ ಕೈ ಹಿಡಿದು ಮಾತನಾಡದೆ ಸುಂದರ ನದಿ ತೀರದಲ್ಲಿ ನಡೆಯಲು,
ಸೊಗಸಾದ ಸಂಜೆಯಲಿ ನಿನ್ನೊಂದಿಗೆ ಕುಳಿತು ಹರಟಲು,
ಕಾಯುತಿದೆ ನನ್ನ ಮನಸು,ಬೋಳಾದ ಮರವು ಚಿಗುರೊಡೆಯಲು ಹವಣಿಸಿ,
ವಸಂತ ಮಾಸವನ್ನು ಕಾಯುವಂತೆ,
ಇಂತಿ ನಿನ್ನ ಪ್ರೀತಿಯ ...
ಕಂಪನ

ಮುಂಜಾನೆಯ ಮಬ್ಬಿನಲಿ

ಮುಂಜಾನೆಯ ಮಬ್ಬಿನಲಿ,ಚಿಲಿಪಿಲಿ ಸದ್ದಿನಲ್ಲಿ,
ಪ್ರಥಮ ಉಷಾ ಕಿರಣವೊಂದು ನಿನ್ನ ಸುಂದರ ಮೊಗವನ್ನು ಚುಂಬಿಸಿದಾಗ,
ದೂರದ ಹಿಮ ಶೃಂಗದಿಂದ ಹಾರಿ ಬಂದ ಮಂಜಿನ ಹನಿಯೊಂದು ನಿನ್ನನು ಸ್ಪರ್ಶಿಸಿದಾಗ,
ತೆರೆದ ನಿನ್ನ ಸುಂದರ ನಯನಗಳ ಕಾಂತಿಗೆ,
ಆ ರವಿಯು ಮೋಡದ ಪರದೆ ಎಳೆದುಕೊಂಡ,ಆ ಚಂದ್ರಮ ಕೂಡ ನಾಚಿ ನೀರಾದ,
ನಿನ್ನ ಮುದ್ದಾದ ಅಧರಗಳಿಂದ ಹೊರಬಂದ ಮುದ್ದಾದ ಮಾತು ಕೇಳಿ,
ಸ್ವರಗಳು ಸುಮ್ಮನಾಗಿ, ಪದಗಳು ಪೆಚ್ಚಾದವು,
ಕೋಗಿಲೆಯೊಂದು ಹಾಡುವುದನ್ನೇ ಮರೆಯಿತು,
ನೀ ನಡೆವಾಗ ಬಂದ ಗೆಜ್ಜೆಯ ನಾದಕ್ಕೆ,ಸಂಗೀತವು ನಿಶ್ಯಬ್ದವಾದವು,
ನವಿಲೊಂದು ನಾಟ್ಯವನ್ನೇ ನಿಲ್ಲಿಸಿತು,
ನಿನ್ನ ಮಧುರ ಸ್ಪರ್ಶಕ್ಕೆ ಗುಲಾಬಿ ಅರಳಿತು,
ಅರಳಿದ ಗುಲಾಬಿಯಿಂದ ಮಧುವನ್ನು ಹೀರಿದ ದುಂಬಿಯೊಂದು,
ನಿನ್ನ ಮಧುರವಾದ ಅಧರವನ್ನು ಮತ್ತೆ ಮತ್ತೆ ಚುಂಬಿಸಿತು,
ದಿನ ಬೆಳಗೋ ಆ ಸೂರ್ಯನ ಹೆಜ್ಜೆಯಲಿ,ಜೇನಿನಂತೆ ನಿನ್ನ ಬಾಳು ಸಿಹಿಯಾಗಿರಲಿ,
ಇಂತಿ ನಿನ್ನ ಪ್ರೀತಿಯ ...
ಕಂಪನ

Monday, 22 September 2008

ನೀನು......... ನಾ,

ನೀನು ಬಿಸಿಲಲ್ಲಿದ್ದರೆ ನಿನ್ನ ನೆರಳು ನಾ,
ನೀನು ನೆರಳಲ್ಲಿದ್ದರೆ ನೆರಳು ಕೊಡುವ ಮರವು ನಾ,
ನೀನಾಡುವ ಸ ರೀ ಗ ಮ ಕೆ ಸ್ವರವು ನಾ,
ನೀ ಬರೆವ ಒಲವಿನ ಒಲೆಗೆ ಪದವು ನಾ,
ನಿನ್ನ ಕೈ ಬಳೆಯು ನಲುಗಿದಾಗ ಹೊಮ್ಮಿದ ನಾದವು ನಾ,
ನೀ ನಡೆವಾಗ ಹೊರಟ ಗೆಜ್ಜೆಯ ದನಿಯು ನಾ,
ನೀ ಮುಡಿದ ಹೂವಿನ ಪರಿಮಳವು ನಾ,
ನಿನ್ನ ಕೆಂದುಟಿಯ ಮೇಲಿನ ಜೇನು ನಾ,
ನಿನ್ನ ಕೆಂಪಾದ ಕೆನ್ನೆಯ ಮೇಲಿನ ನಾಚಿಕೆಯು ನಾ,
ನಿನ್ನ ಅಂದದ ಅಂಗೈನ ಮೇಲಿನ ಗೋರಂಟಿಯು ನಾ,
ನಾ ಬರೆದ ಪತ್ರದ ಪುಟಗಳ ಬಿಡಿಸುವ ನಿನ್ನ ಕಿರುಬೆರಳ ಉಗುರು ನಾ,
ನೀ ಹಿಡಿದ ಬಣ್ಣದ ಕುಂಚ ನಾ, ಆ ಕುಂಚದಲ್ಲಿ ಬಿಡಿಸುವ ಚಿತ್ರ ನಾ,
ನಿನ್ನ ಕಂಗಳ ಸಾಗರದಲ್ಲಿ ತೇಲುವ ಹನಿಯು ನಾ,
ತಂಗಾಳಿ ಬೀಸಿದಾಗ ಹಾರಾಡುವ ನಿನ್ನ ಮುಂಗುರುಳು ನಾ,
ನಿನ್ನ ಪ್ರೀತಿಗೆ ಸೋತೆನ, ಸೋತು ಸೆರೆಯಾದೆನ,
ಇಂತಿ ನಿನ್ನ ಪ್ರೀತಿಯ ...
ಕಂಪನ

ನನ್ನ ಬಾಳ ಪುಟದಲ್ಲಿ

ನನ್ನ ಬಾಳ ಪುಟದಲ್ಲಿ ಸ್ನೇಹದ ಸಿಂಚನ,
ಈ ಸ್ನೇಹದ ಕಡಲಲ್ಲಿ ನನ್ನೇ ಮರೆತೇ ನಾ,
ನಿಮ್ಮ ಮೌನದ ಹಾಡಿನ ರಾಗಕೇ ಸ್ವರವಾಗಿ,
ಸ್ವರಗಳಿಗೆ ಪದವಾಗಿ,ಆ ಪದಗಳಿಗೆ ಪಲ್ಲವಿ ಚರಣಗಳಾಗಿ,
ಎಂದೆಂದಿಗೂ ನಿಮ್ಮ ಜೊತೆಗಿರುವೆ,ಹರಿಯುತಿರಲಿ ನಿಮ್ಮ ಸ್ನೇಹದ ಝರಿ ಎಂದೆಂದಿಗೂ ಹೀಗೆ,
ಇಂತಿ ನಿನ್ನ ಪ್ರೀತಿಯ ...
ಕಂಪನ

ಸ್ನೇಹದ ಸಿಹಿ ಉಣಿಸಿ

ಸ್ನೇಹದ ಸಿಹಿ ಉಣಿಸಿ ದೂರಾಗಲು ಸಾಧ್ಯವೇ,
ನಿನ್ನ ಸ್ನೇಹಕೆ ಸೋತು ನಾ ಮೂಕನಾಗಿರುವೆ,
ಬಂದೆ ಬರುವೆ ಓ ನನ್ನ ಆತ್ಮವೇ,
ಬಂದು ನಿನ್ನ ಮೌನದ ಹಾಡು ಹಾಡುವೆ,
ಹಾಡಿಗೆ ದನಿಯಾಗುವೆ,
ನನ್ನ ಪ್ರೀತಿ ತುಂಬಿದ ಸ್ನೇಹದ ಕಡಲಲ್ಲಿ ನಿನ್ನ ಮಿಂದಿಸುವೆ,
ಇಂತಿ ನಿನ್ನ ಪ್ರೀತಿಯ ...
ಕಂಪನ

ಹಕ್ಕಿಯ ಚಿಲಿಪಿಲಿ ಗಾನ

ಹಕ್ಕಿಯ ಚಿಲಿಪಿಲಿ ಗಾನ ನಿಲ್ಲುವ ಮುನ್ನ,
ಮುಂಜಾನೆ ಸೂರ್ಯ ರಂಗೆರುವ ಮುನ್ನ,
ಎಳೆ ಬಿಸಿಲಿಗೆ ಮಂಜಿನ ಹನಿ ಕರಗುವ ಮುನ್ನ,
ಮುದುಡಿದ ತಾವರೆ ಅರಳುವ ಮುನ್ನ,
ಬಳ್ಳಿಯಲ್ಲಿ ಮಲ್ಲಿಗೆಯು ಘಮಿಸುವ ಮುನ್ನ,
ಅತಿಯಾದ ನಿದ್ರೆಗೆ ನಿನ್ನ ನಯನಗಳು ಸೋಲುವ ಮುನ್ನ,
ರಾತ್ರಿ ಕಂಡ ಸುಂದರ ಸ್ವಪ್ನಕ್ಕೆ ನಿನ್ನ ಕೆನ್ನೆ ಕೆಂಪೆರುವ ಮುನ್ನ,
ನೀ ಬೇಗ ಎದ್ದೇಳು ಚಿನ್ನ,ಈ ದಿನ ಆಗಿರಲಿ ನಿನಗೆ ಶುಭ ದಿನ,
ಇಂತಿ ನಿನ್ನ ಪ್ರೀತಿಯ ...
ಕಂಪನ

ಮನದ ಪುಟಗಳಲಿ ನಿನ್ನ

ಮನದ ಪುಟಗಳಲಿ ನಿನ್ನ ನೆನಪಿನ ಚಿತ್ರ ಬರೆದು ಕಣ್ತುಂಬಿಕೊಳ್ಳುವಸ್ಟರಲ್ಲಿ ಜಾರಿದ ನನ್ನ ಕಣ್ಣ ಹನಿಗಳು,
ಕಣ್ಣೀರು ಹರಿದು ಸಾಗರ ಸೇರುವ ಮುನ್ನ ಕಾಡುವ ನಿನ್ನ ನವಿರು ಭಾವನೆಗಳು,
ಮುಗ್ಧ ಮನವ ಸ್ಪರ್ಶಿಸುವ ಪ್ರೀತಿಯ ನವಿಲುಗರಿಯಂತ ನಿನ್ನ ನೆನಪುಗಳು,
ನನ್ನೊಳಗಿನ ಪ್ರತಿ ಭಾವಕ್ಕೂ ಕನಸಿನ ರೂಪ ಕೊಟ್ಟಾಗ ಹುಟ್ಟಿದ ಕವಿತೆಗಳು,
ತಣ್ಣನೆ ಬೀಸುವ ಬಿಸಿ ತಂಗಾಳಿಗೆ ಹಾರುತ್ತಿರುವ ನಿನ್ನ ಮುಂಗುರುಳು.....
ಹೆದರಿದ ಹರಿಣಿಯಂತೆ ಹುಡುಕುತ್ತಿವೆ ನಿನ್ನ ನಯನಗಳು,
ಹೃದಯದ ಮಾತೊಂದು ನಾಲಿಗೆವರೆಗೂ ಬಂದು ಹೇಳಲಾಗದಂತೆ ಅದುರುತ್ತಿವೆ ನಿನ್ನ ಅಧರಗಳು...
ನಿನಗೊಸ್ಕರ........
ಇಂತಿ ನಿನ್ನ ಪ್ರೀತಿಯ ....
ಕಂಪನ

ಸ್ನೇಹಕೆ ಪ್ರೀತಿಯ ಸಿಂಚನ,

ಸ್ನೇಹಕೆ ಪ್ರೀತಿಯ ಸಿಂಚನ,
ಪ್ರೀತಿಗೆ ಭಾವನೆಗಳ ಸಿಂಚನ,
ಭಾವನೆಗಳಿಗೆ ಪದಗಳ ಸಿಂಚನ,
ಪದಗಳಿಗೆ ರಾಗದ ಸಿಂಚನ,
ರಾಗಕ್ಕೆ ಹಾಡಿನ ಸಿಂಚನ,
ಹಾಡಿಗೆ ಅಧರಗಳಿಂದ ಸಿಂಚನ,
ಅಧರಗಳಿಗೆ ಜೇನಿನ ಸಿಂಚನ,
ಜೇನಿಗೆ ಹೂವಿನ ಘಂಧದ ಸಿಂಚನ,
ಹೂವಿನ ಘಂಧಕೆ ದುಂಬಿಯ ಪ್ರೀತಿಯ ಚುಂಬನ,
ಇಂತಿ ನಿನ್ನ ಪ್ರೀತಿಯ ...
ಕಂಪನ

ನನ್ನ ಹೃದಯದ ಹಾಳೆಯಲ್ಲಿ

ನನ್ನ ಹೃದಯದ ಹಾಳೆಯಲ್ಲಿ ನೀ ಬರೆದೆ ಕವನಗಳ ರಂಗೋಲಿ,
ನಾ ಮೂಕನಾದೆ ನಿನ್ನ ಪದಗಳ ಸಾಲು ಕೇಳಿ ಕೇಳಿ,
ಬರೆಯಲು ಕುಳಿತರೆ ನನ್ನ ಮನಸ್ಸೇ ಖಾಲಿ,
ಯೋಚಿಸಿದಾಗ ತಿಳಿಯಿತು ನನ್ನ ಭಾವನೆಗಳ ನೀ ಕದ್ದಿರುವೆ ಹೇ ಕಳ್ಳಿ,
ಹಾಗೆ ಮಲಗಿಸಿತು ನಿನ್ನ ಕವಿತೆಗಳ ಜೋ ಲಾಲಿ,.........ಪ್ರೀತಿಯಿಂದ ........ ನಿನಗಾಗಿ ನಾ ಹೊಸೆದಿರುವ ಪದಪುಂಜ,
ಇಂತಿ ನಿನ್ನ.......?
ಕಂಪನ