Monday, 13 August 2012

ಏನೋ ಒಂದು STORY!!!!!!!!!!!!

ತುಂಬಾ ದಿನ ಆಯಿತು ಕವನ ಅಂತ ಬರ್ದು, ಸ್ವಲ್ಪ ಬ್ಯುಸಿ ಇದ್ದೆ. ಒಂದು ಹುಡುಗಿನ ತುಂಬಾ ಹಚ್ಕೊಂಡಿದ್ದೆ ಹುಚ್ಚನ ತರ. ಅವಳು ನನ್ನ ಬಿಟ್ಟು ಹೋದಮೇಲೆ, ನನ್ ಲವ್ ಸ್ಟೋರಿನು ಎಲ್ಲಾ disappoint ಲವ್ ಸ್ಟೋರಿ ಲಿಸ್ಟ್ಗೆ ಸೇರ್ಕೊತು,
ಅವಳನ್ನ ಕೊಲೆ ಮಾಡೋವಸ್ಟು ಕೋಪ ಬಂತು,ಆದ್ರೆ ಅಸ್ಟೆಲ್ಲ  ಮೀಟರ್ ಇರ್ಲಿಲ್ಲ,
ನನ್ ಕಿತ್ತೋಗಿರೋ flash back ಮರಿಯೋಕೆ ಕಾಡು, ಬೆಟ್ಟ ಗುಡ್ಡ, ದೇವಸ್ಥಾನ ಅಂತ ಅಲ್ದಿದ್ದು ಆಯಿತು, 
ಒಂದಷ್ಟು ಅಲೆದು ಕಾಲು ನೋವು ಬಂದಮೇಲೆ ಹಾಳಾಗಿ ಹರ್ದೊಗಿದ್ದು ನನ್ ಮನಸ್ಸು ಒಂದು ಲೆವೆಲ್ಗೆ ಬಂತು,  
ವಾಪಾಸ್ ಬಂದಮೇಲೆ start ಆಯಿತು ಮನೆಯವರ ಕಾಟ, ಎಲ್ಲ ಮುಗಿತು, ಇನ್ನು ಒಂದು ಹುಡುಗಿ ನೋಡಿ ಲೈಫ್ ಅಲ್ಲಿ settle ಆಗ್ಬಿದು ಅಂತ, ಯಾವ ಬಡ್ಡಿ ಮಗ ಹೇಳಿದ್ದು ಮದುವೆ ಆದ್ರೆ ಲೈಫ್ ಅಲ್ಲಿ settle ಆಗ್ತಾನೆ ಅಂತ, ನನ್ ಪ್ರಕಾರ ಮದುವೆ ಅಂದ್ರೆ ಇಂಗ್ಲಿಷ್ movieli ತೋರ್ಸೋ "THE  END".
ಸರಿ, ದೊಡ್ಡವರ ಮಾತಿಗೆ ಬೆಲೆ ಕೊಟ್ಟು, ಹುಡುಗಿ ನೋಡೋಕೆ ಶುರು ಮಾಡಿದೆ, 
ಎಲ್ಲಾ ಕಡೆ mixture, ಸ್ವೀಟ್ಸ್ ತಿನ್ನೋದು, ಕಾಫಿ,ಟೀ, juice ಕುಡಿಯೋದು, ಒಂದೇ ವಾರಕ್ಕೆ cocktail ಕುಡಿದು ನನ್ ಹೆಲ್ತ್ ಹಾಳಾಗಿ,ಲೈಫ್ ಬೋರ್ ಅನ್ನ್ಸೋಕೆ ಶುರು ಆಯಿತು, 
ನನ್ನನ್ನ ಯಾರು ಇಷ್ಟ ಪಡ್ತಾರೋ ಅವರು ನಂಗೆ ಇಷ್ಟ ಆಗಲ್ಲ, ನಂಗೆ ಇಷ್ಟ ಹಾಗೊರ್ಗೆ ನಾನು ಇಷ್ಟ ಆಗಲ್ಲ,
ಹೀಗೆ ನಾಲ್ಕು ತಿಂಗಳು complete.
ಅಂತು ಇಂತೂ ಒಂದು ಹುಡುಗಿ ಕಚ್ಕೊಂಡುಬಿಟ್ಲು, ನಂಗೆ ಫುಲ್ confuse, ಯಾಕೆ ಅಂದ್ರೆ ಅವ್ಳು ನನ್ನ ಇಷ್ಟ ಪಟ್ಲ ಅಥವಾ ನಾನು ಅವಳನ ಇಷ್ಟ ಪಡ್ತಾ ಇದಿನಾ ಅಂತ,
ಒಪ್ಪಿಗೆ ಕೊಡೋಕೆ ಒಂದು ವಾರ, ಆಮೇಲೆ ಅದು ಇದು ಅಂತ process ಮಾಡೋಕೆ ಇನ್ನೊಂದು 15 ದಿವಸ ತಗೊಂಡರು,
ಏನ್ ಮಾಡೋದು ಸ್ವಾಮಿ, ನಮ್ ದೇಶದಲ್ಲಿ ಹುಡ್ಗಿರು ಕಡಿಮೆ ಅಂತೆ, ಅದಕ್ಕೆ ಏನೋ ಆ ಹುಡುಗಿ ನೋಕೊಂದು ಬಂದಮೇಲೆ ಒಂದು ಹುಡುಗಿನೂ ನಂಗೆ ನೋಡೋಕೆ ಸಿಗ್ಲಿಲ್ಲ (ಮದುವೆಗೆ).
ಅಯ್ಯೋ ಆಮೇಲೆ ಏನ್ ಹೇಳ್ತೀರ ನನ್ ಕತೆ, ಆ ಹುಡುಗಿ ನಂ ಮದುವೆ ವಿಷ್ಯನ rubber ತರ ಎಲ್ದು ಎಲ್ದು ನಂಗೆ ಮದ್ವೆ ಅಂದ್ರೇನೆ ಅಲರ್ಜಿ ಆಗ್ಬಿಟ್ಟಿದೆ,
ಫೋನ್ ಮಾಡಿದ್ರೆ, intoragation ತರ ನನ್ನೇ interview ಮಾಡ್ತಾಳೆ, 
ನಂಗೆ ಒಂದು ವಿಷ್ಯ ಅರ್ಥ ಆಗ್ಲಿಲ್ಲ, ಲೈಫ್ secure ಬಗ್ಗೆ ತುಂಬಾ ತಲೆ ಕೆಡಿಸ್ಕೋಳೊ ಹುಡ್ಗಿರು,
ಹುಡುಗರ ಮನಸ್ಸನ್ನ ಯಾಕೆ ಅರ್ಥ ಮಾಡ್ಕೊಳಲ್ಲ, ಲೈಫ್ ಅಂದ್ರೆ ದುಡ್ಡು, ಸ್ಟೇಟಸ್ ಅಸ್ಟೆನಾ?
ನಿಂಗೆ salary ಎಷ್ಟು, ಕಾರ್ ಇದ್ಯಾ , ಸ್ವಂತ ಮನೆ ಇದ್ಯಾ ಅಂತ ಕೇಳೋ ಹುಡ್ಗಿರು ನನ್ನ ಎಷ್ಟು ಇಷ್ಟ ಪಡ್ತೀಯ, ಎಷ್ಟು ಲವ್ ಮಾಡ್ತೀಯ ಅಂತ ಯಾಕೆ ಕೇಳೋದಿಲ್ಲ?
ಅವರಿಗೆ ಅದು ಬೇಕಾಗಿಲ್ವ?
million dollar ಪ್ರಶ್ನೆ.
ನನ್ ಸ್ಟೋರಿ ಇನ್ನು ಮುಗ್ದಿಲ್ಲ, ನಾನು ನೋಡಿರೋ ಹುಡುಗಿ ಜೊತೆ engagement ಆದ್ರೆ ಸ್ಟೋರಿ ಸ್ಟಾಪ್ ಮಾಡ್ತೀನಿ, ಇಲ್ಲ ಅಂದ್ರೆ continue ಮಾಡ್ತೀನಿ.  
ಶುಭ ರಾತಿ,
This is my experience.
Just chill
yours, 
KAMPANA

11 comments:

Unknown said...

ಇದು ಒದು ನನ್ನ ಕಥೆ ತರ ಇದೆ ಆದರೆ ಸಲ್ಪ ಬದಲಾವಣೆ ಇದೆ ಅದು ನಾನು ಅವಳನ್ನು ತುಂಬಾ ಇಷ್ಠಪಟ್ಟಿದ್ದೆ ಆದರೆ ಅವಳು ನನಗಿಂತ ಇಷ್ಠ ಪಡುತ್ತಿದ್ದಳು ಆದರೆ ಅವಳು ನಾಟಕ ಆಡುತ್ತಾಇದ್ದಾಳೆ ಅಂತ ಅವಳು ನನ್ನು ಬಿಟ್ಟಮೇಲೆ ನನಗೆ ಗೊತ್ತುಹಾಗಿದ್ದು. ಹೊಗಳ್ಳಿಬಿಡು ಹಾಗುವುದೇಲ್ಲಾ ಒಳ್ಳೇಯದಕ್ಕೆ ಗಾದೆ ಇದೆ.

Unknown said...

ಅವಳ ಹೆಸರು ಪೃಥ್ವಿ ಶ್ರೀ
ಯಾಕೆ ಹುಡುಗಿಯರು ಇಷ್ಟು ಬೇಗ change ಅಗಿ ಬಿಡುತ್ತಾರೆ ಯಾಕೆ?
ಪ್ರಿತಿ ಮಾಡುವಾಗ ಇರುವ ನಂಬಿಕೆ ಆಮೇಲೆ ಯಾಕೆ ಇರುವುದಿಲ್ಲ ಅಂತರು ಪ್ರೀತಿ ಮಾಡಬಾರದು ಹುಡುಗುರನ್ನ ಯಾಕೆ ಎನ್ನೆಲ್ಲಾ ಹೇಳಿ ಮೊಸ ಮಾಡಬಾರದು .

Unknown said...

ನೀಜಾ ನನ್ಗು ಒಂದು ಹುಡುಗಿ ಜೋತೆ ನಿಶ್ಚೀತಾರ್ಥ ಆಗಿತ್ತು ಆದ್ರೆ ಅವಳು ಒಂದು ಹುಡುಗನ್ನು 3ವರ್ಷಗಳಿಂದ ಲವ್ ಮಾಡ್ತಿದ್ಲು ಅಂತೆ ನಾನು ನೌಕರಿಯಲಿದಿನಿ ಅನ್ನೋ ಒಂದೆ ಕಾರಣಕ್ಕೆ ಆ ಹುಡುಗನಿಗೆ (ಅವನಿಗೆ ಕೆಲಸವೀರಲಿಲ್ಲ) ದೂರ ಮಾಡಿದಳು ಆ ವಿಷಯ ಈಗ ನನ್ಗೆ ಆ ಹುಡುಗ ಏಳ್ತಿದನೆ ಹುಡುಗಿಯರು ಹುಡುಗರಿಗೆ ಯಾಕೆ ಮೋಸಾ ಮಾಡ್ತಾರೆ ಪ್ರಿತಿಗಿಂತ ದುಡ್ಡೆ ಮುಖ್ಯ......ಅವರಿಗೆ........

Unknown said...

sir nimma story super agide......,

Unknown said...

ನಂದು same story sir...

ದೇವಣ್ಣ said...

So sad

Unknown said...

Bad👎

Unknown said...

ನಿಜ ಗುರುವೇ ಹಾಗುವುದೇಲ್ಲಾ ಒಳ್ಳೆಯದಕ್ಕೆ...

Unknown said...

ಮತ್ತೆ ಇವಾಗ ಏನ್ ಮಡಿದರಿ

Unknown said...

Very nice dear friend

Unknown said...

ಯಾರು ಮೋಸ ಮಾಡಲ್ಲ