ದಿನಗಳು ಕಳೆದವು, ವರ್ಷಗಳು ಉರುಳಿದವು,
ನನ್ನ ಹೃದಯದ ಗಡಿಯಾರ ನೀನಾಗಿದ್ದ ನೆನಪಾಯಿತು,
ಆದರೂ ನಿನ್ನ ನೆನಪಾಗುತ್ತಿಲ್ಲ!!!
ನಿನ್ನ ನಡೆಗೆ ನಾಚುತ್ತಿದ್ದ ಆ ತಂಗಾಳಿ,
ನಿನ್ನ ಮೋಹಕ ಬೆರಳ ಕಚಗುಳಿ ನೆನಪಾಯಿತು,
ಆದರೂ ನಿನ್ನ ನೆನಪಾಗುತ್ತಿಲ್ಲ!!!
ಒಂದು ಸುಂದರ ಸಂಜೆ ನೀನಾಡಿದ ಪಿಸು ಮಾತು,
ನೀ ಕೇಳಿದ ಸಿಹಿ ಮುತ್ತು, ನಿನ್ನ ಸ್ಪರ್ಶ ನೆನಪಾಯಿತು,
ಆದರೂ ನಿನ್ನ ನೆನಪಾಗುತ್ತಿಲ್ಲ!!!
ನಿನ್ನ ತುಂಟಾಟ, ಹುಡುಗಾಟ, ಪ್ರೀತಿಯ ಪರಿ,
ಎಲ್ಲವೂ ನೆನಪಾಯಿತು, ಆದರೂ ನಿನ್ನ ನೆನಪಾಗುತ್ತಿಲ್ಲ!!!
ಕಾರಣವಿಸ್ಟೆ ಜಾಣೆ, ನಾ ನಿನ್ನ ಮರೆತಿಲ್ಲ ಕಣೆ,
ಇಂತಿ ನಿನ್ನ ಪ್ರೀತಿಯ...
ಕಂಪನ
No comments:
Post a Comment