ಮನಸಲಿದ್ದರು ತೋರಲಾಗದ ಈ ಪ್ರೀತಿ ಹೀಗ್ಯಾಕೆ?
ಕಣ್ಣಲಿದ್ದರು ಕಾಣಿಸದ ಪ್ರೀತಿ ಹೀಗ್ಯಾಕೆ?
ಹೂ ಪರದೆಯಂತ ತುಟಿಯಂಚಲ್ಲಿದ್ದರು ಹೇಳಲಾಗದ ಈ ಪ್ರೀತಿ ಹೀಗ್ಯಾಕೆ?
ಜೊತೆಯಲಿದ್ದರು ಕೈ ಹಿಡಿಯದ ಈ ಪ್ರೀತಿ ಹೀಗ್ಯಾಕೆ?
ದೂರ ಇದ್ದರು ಕಾಡುವ ಪ್ರೀತಿಯ ನೆನಪುಗಳು ಹೀಗ್ಯಾಕೆ?
ಪದಗಳಿದ್ದರೂ ಬರೆಯಲಾಗದ ಪ್ರೀತಿಯ ಸಾಲುಗಳು ಹೀಗ್ಯಾಕೆ?
ನೀ ನನ್ನಲಿದ್ದರು ನಿನ್ನ ಕಾಣುವ ಹಂಬಲ ಹೀಗ್ಯಾಕೆ?
ಇಂತಿ ನಿನ್ನ ಪ್ರೀತಿಯ....
ಕಂಪನ
No comments:
Post a Comment