ದಿನಗಳು ಕಳೆದವು, ವರ್ಷಗಳು ಉರುಳಿದವು,
ನನ್ನ ಹೃದಯದ ಗಡಿಯಾರ ನೀನಾಗಿದ್ದ ನೆನಪಾಯಿತು,
ಆದರೂ ನಿನ್ನ ನೆನಪಾಗುತ್ತಿಲ್ಲ!!!
ನಿನ್ನ ನಡೆಗೆ ನಾಚುತ್ತಿದ್ದ ಆ ತಂಗಾಳಿ,
ನಿನ್ನ ಮೋಹಕ ಬೆರಳ ಕಚಗುಳಿ ನೆನಪಾಯಿತು,
ಆದರೂ ನಿನ್ನ ನೆನಪಾಗುತ್ತಿಲ್ಲ!!!
ಒಂದು ಸುಂದರ ಸಂಜೆ ನೀನಾಡಿದ ಪಿಸು ಮಾತು,
ನೀ ಕೇಳಿದ ಸಿಹಿ ಮುತ್ತು, ನಿನ್ನ ಸ್ಪರ್ಶ ನೆನಪಾಯಿತು,
ಆದರೂ ನಿನ್ನ ನೆನಪಾಗುತ್ತಿಲ್ಲ!!!
ನಿನ್ನ ತುಂಟಾಟ, ಹುಡುಗಾಟ, ಪ್ರೀತಿಯ ಪರಿ,
ಎಲ್ಲವೂ ನೆನಪಾಯಿತು, ಆದರೂ ನಿನ್ನ ನೆನಪಾಗುತ್ತಿಲ್ಲ!!!
ಕಾರಣವಿಸ್ಟೆ ಜಾಣೆ, ನಾ ನಿನ್ನ ಮರೆತಿಲ್ಲ ಕಣೆ,
ಇಂತಿ ನಿನ್ನ ಪ್ರೀತಿಯ...
ಕಂಪನ
ಎರಡು ಹೃದಯಗಳು ಸೇರಿದರೆ ಮಾತ್ರ ಪ್ರೀತಿ ಹುಟ್ಟೋದು, ಎಲ್ಲಾ ಹೃದಯಗಳು ಮತ್ತೊಂದು ಹೃದಯದ ಪ್ರೀತಿಗಾಗಿ ಮಿಡಿಯುತ್ತಿರುತ್ತವೆ, ಈ ಪ್ರೀತಿಯ ಪಯಣದಲ್ಲಿ ಮಿಡಿದ ಮಿಡಿತವೇ ಈ ಪ್ರೇಮ ಕವನಗಳು, ಇಂತಿ ನಿಮ್ಮ ಪ್ರೀತಿಯ.... ಕಂಪನ
Sunday, 14 December 2008
Thursday, 11 December 2008
ಹೀಗ್ಯಾಕೆ?
ಮನಸಲಿದ್ದರು ತೋರಲಾಗದ ಈ ಪ್ರೀತಿ ಹೀಗ್ಯಾಕೆ?
ಕಣ್ಣಲಿದ್ದರು ಕಾಣಿಸದ ಪ್ರೀತಿ ಹೀಗ್ಯಾಕೆ?
ಹೂ ಪರದೆಯಂತ ತುಟಿಯಂಚಲ್ಲಿದ್ದರು ಹೇಳಲಾಗದ ಈ ಪ್ರೀತಿ ಹೀಗ್ಯಾಕೆ?
ಜೊತೆಯಲಿದ್ದರು ಕೈ ಹಿಡಿಯದ ಈ ಪ್ರೀತಿ ಹೀಗ್ಯಾಕೆ?
ದೂರ ಇದ್ದರು ಕಾಡುವ ಪ್ರೀತಿಯ ನೆನಪುಗಳು ಹೀಗ್ಯಾಕೆ?
ಪದಗಳಿದ್ದರೂ ಬರೆಯಲಾಗದ ಪ್ರೀತಿಯ ಸಾಲುಗಳು ಹೀಗ್ಯಾಕೆ?
ನೀ ನನ್ನಲಿದ್ದರು ನಿನ್ನ ಕಾಣುವ ಹಂಬಲ ಹೀಗ್ಯಾಕೆ?
ಇಂತಿ ನಿನ್ನ ಪ್ರೀತಿಯ....

Subscribe to:
Posts (Atom)