ನನ್ನ ಹೃದಯದ ಮೇಲೆ ನೀ ಮಾಡಿದ ಪ್ರೀತಿಯ ಹಸ್ತಾಕ್ಷರ,
ನಾ ಅಳಿಯದಂತೆ ಉಳಿಸಿದೆ ನನ್ನ ಉಸಿರ,
ನನ್ನ ಪ್ರತಿ ಮಿಡಿತವು ಪ್ರತಿಧ್ವನಿಸಿದೆ ನಿನ್ನ ಹೆಸರ,
ನಿನ್ನ ಕಣ್ಣಿನ ಸುರುಳಿಯಲ್ಲಿ ನನ್ನೇಕೆ ಸೆರೆ ಹಿಡಿದೆ?
ನಾನೇಕೆ ನಿನ್ನ ತೋಳ್ತೆಕ್ಕೆಯಲ್ಲಿ ಬಂಧಿಯಾದೆ?
ಬೆಳದಿಂಗಳ ಪ್ರೀತಿಯಲ್ಲಿ ನಾನೇಕೆ ಕರಗಿ ಹೋದೆ?
ನನ್ನ ಪ್ರಶ್ನೆಗಳ ಸರಪಳಿ ಬಿಡಿಸುವ ಮೊದಲು,
ನಿನ್ನ ಮುತ್ತಿನಂತ ಮಾತಿಗೆ ಮೂಕನಾಗಿರುವ ನನ್ನನ್ನೊಮ್ಮೆ ಮಾತನಾಡಿಸೆ,
ಇಂತಿ ನಿನ್ನ ಪ್ರೀತಿಯ...
ಕಂಪನ
No comments:
Post a Comment