ಮನದೊಳಗಿನ ಮಾತೊಂದು ಹೊರ ಬರುವುದರಲಿತ್ತು,
ನಿನ್ನ ಬಿಸಿಯುಸಿರ ಅಧರವು ನನ್ನ ತುಟಿಯನ್ನು ಮುಚ್ಚಿತ್ತು,
ಭಾವನೆಗಳಿಗೆ ಬಾಗಿಲು ಹಾಕಿ, ಬಯಕೆಯ ಬೇಲಿಯೊಳಗೆ ಬಂಧಿಯಾಗಿರಲು,
ಶರವೇಗದಿ ಕಂಪಿಸಿದ ನಿನ್ನೆದೆ ಮಿಡಿತಕೆ,
ಮೊದಲ ಸಲ ನಿಂತಿತು ನನ್ನೆದೆ ಬಡಿತ ಒಂದು ಕ್ಷಣ,
ಅದೇ ...
ನೀನೊಲಿದ ಆ ಕ್ಷಣ...
ಇಂತಿ ನಿನ್ನ ಪ್ರೀತಿಯ...
ಕಂಪನ
ಎರಡು ಹೃದಯಗಳು ಸೇರಿದರೆ ಮಾತ್ರ ಪ್ರೀತಿ ಹುಟ್ಟೋದು, ಎಲ್ಲಾ ಹೃದಯಗಳು ಮತ್ತೊಂದು ಹೃದಯದ ಪ್ರೀತಿಗಾಗಿ ಮಿಡಿಯುತ್ತಿರುತ್ತವೆ, ಈ ಪ್ರೀತಿಯ ಪಯಣದಲ್ಲಿ ಮಿಡಿದ ಮಿಡಿತವೇ ಈ ಪ್ರೇಮ ಕವನಗಳು, ಇಂತಿ ನಿಮ್ಮ ಪ್ರೀತಿಯ.... ಕಂಪನ
Sunday, 1 November 2009
Tuesday, 25 August 2009
ನೆನಪು......
ಬದುಕಿನ ಅರಮನೆಯಲ್ಲಿ ಹೃದಯದ ಬಾಗಿಲ ಮೇಲೆ ನೀ ಬಿಡಿಸಿದ ಭಾವನೆಗಳ ಚಿತ್ರ,
ನಿನ್ನ ಮರೆಯಲಾಗದಂತೆ ಕಟ್ಟಿಹಾಕಿದೆ ನೀನೆ ಬರೆದ ಪ್ರಾಸಗಳ ಪತ್ರ,
ಮಾತುಗಳ ಜೊತೆಗೆ ನೋಟ ಬೆರೆಸಿ ಸೆಳೆದುಕೊಂಡೆ ನಿನ್ನ ಹತ್ರ,
ಹುಚ್ಚು ಮನಸಿನ ಸಾಗರದಲ್ಲಿ ಉಳಿದದ್ದು ನಿನ್ನ ನೆನಪುಗಳು ಮಾತ್ರ,
ನೆನಪುಗಳ ಹಾಯುತ್ತಿದಾಗ ಮತ್ತೆ ಮತ್ತೆ ಕಂಡದ್ದು ನಿನ್ನ ಹೆಜ್ಜೆ ಗುರುತುಗಳು ಮಾತ್ರ!

ಹೋಲಿಕೆ....
ಮೊಗದ ಮುದ್ದಾಟ ಸಾಕೆಂದು ಮುಡಿ ಸೇರಿದ ನಿನ್ನ ಮುಂಗುರುಳು,
ಭೂಮಿ ಆಕಾಶ ಬೆಸೆದ ಕಾಮನಬಿಲ್ಲಂತ ಹುಬ್ಬುಗಳು,
ಕನಸುಗಳ ಸಾಗರದಿ ಈಜಾಡುತ್ತಿರುವ ನಿನ್ನ ಕಣ್ ಬಿಂಬಕೆ ಚಾಮರವಾಗಿವೆ ರೆಪ್ಪೆಗಳು,
ಕುಡಿ ನೋಟದಿ ಕೊಲೆ ಮಾಡುವ ನಿನ್ನ ನಯನಗಳು,
ನಿನಗಾಗಿಯೇ ನಾ ಬರೆದೆ ಸುಂದರ ಕವನಗಳು....
ಇಂತಿ ನಿನ್ನ ಪ್ರೀತಿಯ...
ಕಂಪನ
ಭೂಮಿ ಆಕಾಶ ಬೆಸೆದ ಕಾಮನಬಿಲ್ಲಂತ ಹುಬ್ಬುಗಳು,
ಕನಸುಗಳ ಸಾಗರದಿ ಈಜಾಡುತ್ತಿರುವ ನಿನ್ನ ಕಣ್ ಬಿಂಬಕೆ ಚಾಮರವಾಗಿವೆ ರೆಪ್ಪೆಗಳು,
ಕುಡಿ ನೋಟದಿ ಕೊಲೆ ಮಾಡುವ ನಿನ್ನ ನಯನಗಳು,
ನಿನಗಾಗಿಯೇ ನಾ ಬರೆದೆ ಸುಂದರ ಕವನಗಳು....
ಇಂತಿ ನಿನ್ನ ಪ್ರೀತಿಯ...
ಕಂಪನ
Saturday, 21 March 2009
ಸ್ವಾತಿ ಮಳೆ
ಹುಣ್ಣಿಮೆಯ ದಾಟಿ ಎಳೆ ಬಿಸಿಲಲಿ ಕಾದು ನಿಂತೆ,
ಮುಂಜಾನೆ ಸುರಿವ ಇಬ್ಬನಿಗೆಂದು...
ಎಳೆ ಬಿಸಿಲು ಕರಗಿ ಬಿರು ಬಿಸಿಲೆಡೆಗೆ ಆಡಿಯಿಟ್ಟೆ,
ಸಂಧ್ಯಾ ಸಮಯದ ಸ್ವಾತಿ ಮಳೆಗೆಂದು...
ಮುತ್ತಿನಂತ ಹನಿಯ ಮೊಗದ ಮೇಲೆರಚಿ,
ಮಾಯವಾದ ಸ್ವಾತಿ ಮಳೆಗೆ ನಾ ಕಾದಿರುವೆ ಹೀಗೆ...
ಎಂದೆಂದೂ.....
ಇಂತಿ ನಿನ್ನ ಪ್ರೀತಿಯ ...

Tuesday, 3 February 2009
ಹಸ್ತಾಕ್ಷರ
ನನ್ನ ಹೃದಯದ ಮೇಲೆ ನೀ ಮಾಡಿದ ಪ್ರೀತಿಯ ಹಸ್ತಾಕ್ಷರ,
ನಾ ಅಳಿಯದಂತೆ ಉಳಿಸಿದೆ ನನ್ನ ಉಸಿರ,
ನನ್ನ ಪ್ರತಿ ಮಿಡಿತವು ಪ್ರತಿಧ್ವನಿಸಿದೆ ನಿನ್ನ ಹೆಸರ,
ನಿನ್ನ ಕಣ್ಣಿನ ಸುರುಳಿಯಲ್ಲಿ ನನ್ನೇಕೆ ಸೆರೆ ಹಿಡಿದೆ?
ನಾನೇಕೆ ನಿನ್ನ ತೋಳ್ತೆಕ್ಕೆಯಲ್ಲಿ ಬಂಧಿಯಾದೆ?
ಬೆಳದಿಂಗಳ ಪ್ರೀತಿಯಲ್ಲಿ ನಾನೇಕೆ ಕರಗಿ ಹೋದೆ?
ನನ್ನ ಪ್ರಶ್ನೆಗಳ ಸರಪಳಿ ಬಿಡಿಸುವ ಮೊದಲು,
ನಿನ್ನ ಮುತ್ತಿನಂತ ಮಾತಿಗೆ ಮೂಕನಾಗಿರುವ ನನ್ನನ್ನೊಮ್ಮೆ ಮಾತನಾಡಿಸೆ,

Sunday, 11 January 2009
ಮುನಿಸು!!!!
ರಂಗೇರಿದ ಮೊಗದೊಲ್ಲೊಂದು ಬಿರುಸಾದ ಹುಸಿಮುನಿಸು,
ನಲ್ಲೆ, ನೀನೀಗ ನೋಡಲೆಂತು ಸೊಗಸು,
ಕೆಂದಾವರೆಯಂತ ಕೆನ್ನೆಯ ಮೇಲೆ,ಕಣ್ಣಿಂದ ಜಾರಿದ ಹನಿಯ ಲೀಲೆ,
ಬಿಂಬವಾಗಿ ನಾನಿದ್ದೆ ಆ ಹನಿಯಲ್ಲಿ,ಹೂವಿನ ಎಸಳಂತೆ ಜಾರಿಬಿತ್ತು ನನ್ನ ಅಂಗೈಲಿ,
ಬೊಗಸೆಯಲ್ಲಿ ಹಿಡಿದಿಟ್ಟ ಕಣ್ಣೀರ ಹನಿಯ, ಎದೆಯ ಚಿಪ್ಪಲ್ಲಿಟ್ಟು, ಪ್ರೀತಿಯ ಮುತ್ತನು ಮಾಡಿ,
ಉಡುಗೊರೆಯ ನೀಡುವೆಕಣೆ,ಮುನಿಸಿನ ಮೊಗದ ಮೇಲೆ,
ಮಂದಹಾಸವ ಕಾಣುವಾಸೆಕಣೆ,

Subscribe to:
Posts (Atom)