Saturday, 8 November 2008

ಕೋಪವೇಕೆ....?

ನೀನೆ ಹಾಡಿದ ಸ ರೀ ಗ ಮ ದಲ್ಲಿ ಕಂಪನವೇಕೆ?
ನೀ ಹಚ್ಚಿದ ದೀಪದಲ್ಲಿ ಕತ್ತಲೆ ಏಕೆ?
ನೀ ನುಡಿಸಿದ ವೀಣೆಯ ನಾದದಲ್ಲಿ ಕರ್ಕಶವೇಕೆ?
ನಿನ್ನ ಹುಣ್ಣಿಮೆಯಂತ ನಗುವಿನಲ್ಲಿ ವ್ಯಂಗ್ಯವೇಕೆ?
ನಿನ್ನ ಮುದ್ದಾದ ಮಾತಿನ ಸಿಹಿಗಾಳಿಯಲ್ಲಿ, ಮೌನದ ಬಿರುಗಾಳಿಯೇಕೆ?
ಚಿನ್ನ....
ನಿನ್ನ ಪ್ರೀತಿಯ ಬಲೆಯಲ್ಲಿ ಬಂಧಿಯಾಗಿರುವ ನನ್ನ ಮೇಲೆ, ಮುತ್ತಿನಂತ ಕೋಪವೇಕೆ?

ಇಂತಿ ನಿನ್ನ ಪ್ರೀತಿಯ...
ಕಂಪನ

No comments: