Friday, 22 March 2013

ಕಾದಿರುವೆ ಗೆಳತಿ...


ಕಾದಿರುವೆ ಗೆಳತಿ,
ನಿನ್ನ ಆಸೆ ಕಂಗಳಿಗೆ ಮುತ್ತಿಡಲು,
ನನ್ನೆದೆಯ ಹಾಳೆಯ ಮೇಲೆ,ನಾ ಬರೆದ ಪ್ರೀತಿಯೋಲೆಯ ನಿನಗೆ ತಿಳಿಸಲು,
ನೀ ದೂರವಿದ್ದರೂ ಕಾಡಿದ ನಿನ್ನ ನೆನಪುಗಳ ಮೆಲುಕು ಹಾಕಲು,
ನೀನುಲಿವ ಮಧುರ ಮಾತುಗಳ ಆಲಿಸಲು,
ನೀ ಬರೆವ ಕವನಗಳ ನಾಯಕನಾಗಲು,
ನೀ ಬಿಡಿಸುವ ಚಿತ್ರದ ಪಟವಾಗಲು,
ನಿನ್ನ ಭಾವನೆಗಳ ಸಾಗರದಲ್ಲಿ ಈಜಾಡಲು,
ನನ್ನ ಬರುವಿಕೆಗೆ ಕಾಯ್ದು ಹಾಡುವ ನಿನ್ನ ಮನದ ಸಂಗೀತವಾಗಲು,
ನಿನ್ನ ಸೇರುವ ದಿನ ಹತ್ತಿರ ಬಂದಂತೆ,
ಯಾಕೋ ಕಂಪಿಸುತಿದೆ ಮನವು ನಿನ್ನ ಸನಿಹ ಬರಲು
ಇಂತಿ ನಿನ್ನ ಪ್ರೀತಿಯ...
ಕಂಪನ

Monday, 13 August 2012

ಏನೋ ಒಂದು STORY!!!!!!!!!!!!

ತುಂಬಾ ದಿನ ಆಯಿತು ಕವನ ಅಂತ ಬರ್ದು, ಸ್ವಲ್ಪ ಬ್ಯುಸಿ ಇದ್ದೆ. ಒಂದು ಹುಡುಗಿನ ತುಂಬಾ ಹಚ್ಕೊಂಡಿದ್ದೆ ಹುಚ್ಚನ ತರ. ಅವಳು ನನ್ನ ಬಿಟ್ಟು ಹೋದಮೇಲೆ, ನನ್ ಲವ್ ಸ್ಟೋರಿನು ಎಲ್ಲಾ disappoint ಲವ್ ಸ್ಟೋರಿ ಲಿಸ್ಟ್ಗೆ ಸೇರ್ಕೊತು,
ಅವಳನ್ನ ಕೊಲೆ ಮಾಡೋವಸ್ಟು ಕೋಪ ಬಂತು,ಆದ್ರೆ ಅಸ್ಟೆಲ್ಲ  ಮೀಟರ್ ಇರ್ಲಿಲ್ಲ,
ನನ್ ಕಿತ್ತೋಗಿರೋ flash back ಮರಿಯೋಕೆ ಕಾಡು, ಬೆಟ್ಟ ಗುಡ್ಡ, ದೇವಸ್ಥಾನ ಅಂತ ಅಲ್ದಿದ್ದು ಆಯಿತು, 
ಒಂದಷ್ಟು ಅಲೆದು ಕಾಲು ನೋವು ಬಂದಮೇಲೆ ಹಾಳಾಗಿ ಹರ್ದೊಗಿದ್ದು ನನ್ ಮನಸ್ಸು ಒಂದು ಲೆವೆಲ್ಗೆ ಬಂತು,  
ವಾಪಾಸ್ ಬಂದಮೇಲೆ start ಆಯಿತು ಮನೆಯವರ ಕಾಟ, ಎಲ್ಲ ಮುಗಿತು, ಇನ್ನು ಒಂದು ಹುಡುಗಿ ನೋಡಿ ಲೈಫ್ ಅಲ್ಲಿ settle ಆಗ್ಬಿದು ಅಂತ, ಯಾವ ಬಡ್ಡಿ ಮಗ ಹೇಳಿದ್ದು ಮದುವೆ ಆದ್ರೆ ಲೈಫ್ ಅಲ್ಲಿ settle ಆಗ್ತಾನೆ ಅಂತ, ನನ್ ಪ್ರಕಾರ ಮದುವೆ ಅಂದ್ರೆ ಇಂಗ್ಲಿಷ್ movieli ತೋರ್ಸೋ "THE  END".
ಸರಿ, ದೊಡ್ಡವರ ಮಾತಿಗೆ ಬೆಲೆ ಕೊಟ್ಟು, ಹುಡುಗಿ ನೋಡೋಕೆ ಶುರು ಮಾಡಿದೆ, 
ಎಲ್ಲಾ ಕಡೆ mixture, ಸ್ವೀಟ್ಸ್ ತಿನ್ನೋದು, ಕಾಫಿ,ಟೀ, juice ಕುಡಿಯೋದು, ಒಂದೇ ವಾರಕ್ಕೆ cocktail ಕುಡಿದು ನನ್ ಹೆಲ್ತ್ ಹಾಳಾಗಿ,ಲೈಫ್ ಬೋರ್ ಅನ್ನ್ಸೋಕೆ ಶುರು ಆಯಿತು, 
ನನ್ನನ್ನ ಯಾರು ಇಷ್ಟ ಪಡ್ತಾರೋ ಅವರು ನಂಗೆ ಇಷ್ಟ ಆಗಲ್ಲ, ನಂಗೆ ಇಷ್ಟ ಹಾಗೊರ್ಗೆ ನಾನು ಇಷ್ಟ ಆಗಲ್ಲ,
ಹೀಗೆ ನಾಲ್ಕು ತಿಂಗಳು complete.
ಅಂತು ಇಂತೂ ಒಂದು ಹುಡುಗಿ ಕಚ್ಕೊಂಡುಬಿಟ್ಲು, ನಂಗೆ ಫುಲ್ confuse, ಯಾಕೆ ಅಂದ್ರೆ ಅವ್ಳು ನನ್ನ ಇಷ್ಟ ಪಟ್ಲ ಅಥವಾ ನಾನು ಅವಳನ ಇಷ್ಟ ಪಡ್ತಾ ಇದಿನಾ ಅಂತ,
ಒಪ್ಪಿಗೆ ಕೊಡೋಕೆ ಒಂದು ವಾರ, ಆಮೇಲೆ ಅದು ಇದು ಅಂತ process ಮಾಡೋಕೆ ಇನ್ನೊಂದು 15 ದಿವಸ ತಗೊಂಡರು,
ಏನ್ ಮಾಡೋದು ಸ್ವಾಮಿ, ನಮ್ ದೇಶದಲ್ಲಿ ಹುಡ್ಗಿರು ಕಡಿಮೆ ಅಂತೆ, ಅದಕ್ಕೆ ಏನೋ ಆ ಹುಡುಗಿ ನೋಕೊಂದು ಬಂದಮೇಲೆ ಒಂದು ಹುಡುಗಿನೂ ನಂಗೆ ನೋಡೋಕೆ ಸಿಗ್ಲಿಲ್ಲ (ಮದುವೆಗೆ).
ಅಯ್ಯೋ ಆಮೇಲೆ ಏನ್ ಹೇಳ್ತೀರ ನನ್ ಕತೆ, ಆ ಹುಡುಗಿ ನಂ ಮದುವೆ ವಿಷ್ಯನ rubber ತರ ಎಲ್ದು ಎಲ್ದು ನಂಗೆ ಮದ್ವೆ ಅಂದ್ರೇನೆ ಅಲರ್ಜಿ ಆಗ್ಬಿಟ್ಟಿದೆ,
ಫೋನ್ ಮಾಡಿದ್ರೆ, intoragation ತರ ನನ್ನೇ interview ಮಾಡ್ತಾಳೆ, 
ನಂಗೆ ಒಂದು ವಿಷ್ಯ ಅರ್ಥ ಆಗ್ಲಿಲ್ಲ, ಲೈಫ್ secure ಬಗ್ಗೆ ತುಂಬಾ ತಲೆ ಕೆಡಿಸ್ಕೋಳೊ ಹುಡ್ಗಿರು,
ಹುಡುಗರ ಮನಸ್ಸನ್ನ ಯಾಕೆ ಅರ್ಥ ಮಾಡ್ಕೊಳಲ್ಲ, ಲೈಫ್ ಅಂದ್ರೆ ದುಡ್ಡು, ಸ್ಟೇಟಸ್ ಅಸ್ಟೆನಾ?
ನಿಂಗೆ salary ಎಷ್ಟು, ಕಾರ್ ಇದ್ಯಾ , ಸ್ವಂತ ಮನೆ ಇದ್ಯಾ ಅಂತ ಕೇಳೋ ಹುಡ್ಗಿರು ನನ್ನ ಎಷ್ಟು ಇಷ್ಟ ಪಡ್ತೀಯ, ಎಷ್ಟು ಲವ್ ಮಾಡ್ತೀಯ ಅಂತ ಯಾಕೆ ಕೇಳೋದಿಲ್ಲ?
ಅವರಿಗೆ ಅದು ಬೇಕಾಗಿಲ್ವ?
million dollar ಪ್ರಶ್ನೆ.
ನನ್ ಸ್ಟೋರಿ ಇನ್ನು ಮುಗ್ದಿಲ್ಲ, ನಾನು ನೋಡಿರೋ ಹುಡುಗಿ ಜೊತೆ engagement ಆದ್ರೆ ಸ್ಟೋರಿ ಸ್ಟಾಪ್ ಮಾಡ್ತೀನಿ, ಇಲ್ಲ ಅಂದ್ರೆ continue ಮಾಡ್ತೀನಿ.  
ಶುಭ ರಾತಿ,
This is my experience.
Just chill
yours, 
KAMPANA

Tuesday, 13 April 2010

ನಿದಿರೆ

ಸುಂದರ ಕಾನನದೊಳು,ಕವಿದಿದೆ ಕಾರಿರುಳು,
ನಿದಿರೆಯ ಅಮಲು,ನನ್ನವಳ ತುಂಬಿರಲು,
ಕಿಟಕಿಯೊಳು ತೂರಿ ಆ ಬಂದ ಬೆಳದಿಂಗಳು,
ಎನ್ನ ಮನದನ್ನೆಯ ಮೊಗವ ಚುಂಬಿಸಲು,
ಮುಸುಕೆಳೆದು ಮಲಗಿದ ನನ್ನರಸಿಯ,
ಮುಖ ಕಾಣದೆ ಮುನಿಸಿಕೊಂಡ ಚಂದ್ರಮನು,
ತಾರೆಗಳ ತೊಟ್ಟಿಲಲಿ ಮೋಡದ ಹೊದಿಕೆ ಹೊದ್ದು,
ಮುಂಜಾವಿಗೆ ಕಾದಿರುವನು...
ಇಂತಿ ನಿನ್ನ ಪ್ರೀತಿಯ...
ಕಂಪನ

Wednesday, 24 February 2010

ಏಕೆ ???

ಓ ದೇವನೇ,
ಸಕಲ ಜೀವಿಗೂ ಈ ಭುವಿಯ ಸಮನಾಗಿ ಹಂಚಿರುವೆ,
ಈ ಧರಣಿಗೆಕೇ ಒಬ್ಬನೇ ಚಂದ್ರಮನ ಇಟ್ಟಿರುವೆ?
ಮನಸೊಳಗೆ ಮುಕ್ತ ನಗುವನಿಟ್ಟೀರುವೆ,
ಕೆಂದುಟಿಯ ಮೇಲೇಕೆ ಕಿರುನಗೆಯ ಇಟ್ಟಿರುವೆ?
ಹಳೆಯದಾದರೂ ಮರೆಯದ ಸ್ನೇಹವ ಕೊಟ್ಟಿರುವೆ,
ಕಾಣದ ಪ್ರೀತಿಯ ಒಬ್ಬರಿಗೇಕೆ ಇಟ್ಟಿರುವೆ?
ಕಣ್ಕುಕ್ಕುವ ಸೌಂದರ್ಯವ ನೀಡಿರುವೆ,
ಗಲ್ಲದ ಕೊನೆಯಲ್ಲಿ ಕಪ್ಪು ಚುಕ್ಕಿಯೇಕೆ ಇಟ್ಟಿರುವೆ?
ಬಳಿ ಬಂದು ಬರ ಸೆಳೆದು ಬಿಸಿಯಪ್ಪುಗೆಯ ನೀಡುವ ರನ್ನೆಯ ಕೊಟ್ಟಿರುವೆ,
ಕೆನ್ನೆಯ ಮೇಲೊಂದು,ತುಟಿಯ ತುದಿಯಲ್ಲೊಂದು,
ಮುತ್ತು ಕೊಡು ಎಂದೆಳಲೇಕೆ ಮರೆತಿರುವೆ???
ಇಂತಿ ನಿನ್ನ ಪ್ರೀತಿಯ...
ಕಂಪನ

Sunday, 1 November 2009

ನೀನೊಲಿದ ಆ ಕ್ಷಣ...

ಮನದೊಳಗಿನ ಮಾತೊಂದು ಹೊರ ಬರುವುದರಲಿತ್ತು,
ನಿನ್ನ ಬಿಸಿಯುಸಿರ ಅಧರವು ನನ್ನ ತುಟಿಯನ್ನು ಮುಚ್ಚಿತ್ತು,
ಭಾವನೆಗಳಿಗೆ ಬಾಗಿಲು ಹಾಕಿ, ಬಯಕೆಯ ಬೇಲಿಯೊಳಗೆ ಬಂಧಿಯಾಗಿರಲು,
ಶರವೇಗದಿ ಕಂಪಿಸಿದ ನಿನ್ನೆದೆ ಮಿಡಿತಕೆ,
ಮೊದಲ ಸಲ ನಿಂತಿತು ನನ್ನೆದೆ ಬಡಿತ ಒಂದು ಕ್ಷಣ,
ಅದೇ ...
ನೀನೊಲಿದ ಆ ಕ್ಷಣ...
ಇಂತಿ ನಿನ್ನ ಪ್ರೀತಿಯ...
ಕಂಪನ

Tuesday, 25 August 2009

ನೆನಪು......

ಬದುಕಿನ ಅರಮನೆಯಲ್ಲಿ ಹೃದಯದ ಬಾಗಿಲ ಮೇಲೆ ನೀ ಬಿಡಿಸಿದ ಭಾವನೆಗಳ ಚಿತ್ರ,
ನಿನ್ನ ಮರೆಯಲಾಗದಂತೆ ಕಟ್ಟಿಹಾಕಿದೆ ನೀನೆ ಬರೆದ ಪ್ರಾಸಗಳ ಪತ್ರ,
ಮಾತುಗಳ ಜೊತೆಗೆ ನೋಟ ಬೆರೆಸಿ ಸೆಳೆದುಕೊಂಡೆ ನಿನ್ನ ಹತ್ರ,
ಹುಚ್ಚು ಮನಸಿನ ಸಾಗರದಲ್ಲಿ ಉಳಿದದ್ದು ನಿನ್ನ ನೆನಪುಗಳು ಮಾತ್ರ,
ನೆನಪುಗಳ ಹಾಯುತ್ತಿದಾಗ ಮತ್ತೆ ಮತ್ತೆ ಕಂಡದ್ದು ನಿನ್ನ ಹೆಜ್ಜೆ ಗುರುತುಗಳು ಮಾತ್ರ!
ಇಂತಿ ನಿನ್ನ ಪ್ರೀತಿಯ...
ಕಂಪನ

ಹೋಲಿಕೆ....

ಮೊಗದ ಮುದ್ದಾಟ ಸಾಕೆಂದು ಮುಡಿ ಸೇರಿದ ನಿನ್ನ ಮುಂಗುರುಳು,
ಭೂಮಿ ಆಕಾಶ ಬೆಸೆದ ಕಾಮನಬಿಲ್ಲಂತ ಹುಬ್ಬುಗಳು,
ಕನಸುಗಳ ಸಾಗರದಿ ಈಜಾಡುತ್ತಿರುವ ನಿನ್ನ ಕಣ್ ಬಿಂಬಕೆ ಚಾಮರವಾಗಿವೆ ರೆಪ್ಪೆಗಳು,
ಕುಡಿ ನೋಟದಿ ಕೊಲೆ ಮಾಡುವ ನಿನ್ನ ನಯನಗಳು,
ನಿನಗಾಗಿಯೇ ನಾ ಬರೆದೆ ಸುಂದರ ಕವನಗಳು....
ಇಂತಿ ನಿನ್ನ ಪ್ರೀತಿಯ...
ಕಂಪನ

Saturday, 21 March 2009

ಸ್ವಾತಿ ಮಳೆ

ಹುಣ್ಣಿಮೆಯ ದಾಟಿ ಎಳೆ ಬಿಸಿಲಲಿ ಕಾದು ನಿಂತೆ,
ಮುಂಜಾನೆ ಸುರಿವ ಇಬ್ಬನಿಗೆಂದು...
ಎಳೆ ಬಿಸಿಲು ಕರಗಿ ಬಿರು ಬಿಸಿಲೆಡೆಗೆ ಆಡಿಯಿಟ್ಟೆ,
ಸಂಧ್ಯಾ ಸಮಯದ ಸ್ವಾತಿ ಮಳೆಗೆಂದು...
ಮುತ್ತಿನಂತ ಹನಿಯ ಮೊಗದ ಮೇಲೆರಚಿ,
ಮಾಯವಾದ ಸ್ವಾತಿ ಮಳೆಗೆ ನಾ ಕಾದಿರುವೆ ಹೀಗೆ...
ಎಂದೆಂದೂ.....
ಇಂತಿ ನಿನ್ನ ಪ್ರೀತಿಯ ...
ಕಂಪನ