Tuesday, 25 August 2009

ನೆನಪು......

ಬದುಕಿನ ಅರಮನೆಯಲ್ಲಿ ಹೃದಯದ ಬಾಗಿಲ ಮೇಲೆ ನೀ ಬಿಡಿಸಿದ ಭಾವನೆಗಳ ಚಿತ್ರ,
ನಿನ್ನ ಮರೆಯಲಾಗದಂತೆ ಕಟ್ಟಿಹಾಕಿದೆ ನೀನೆ ಬರೆದ ಪ್ರಾಸಗಳ ಪತ್ರ,
ಮಾತುಗಳ ಜೊತೆಗೆ ನೋಟ ಬೆರೆಸಿ ಸೆಳೆದುಕೊಂಡೆ ನಿನ್ನ ಹತ್ರ,
ಹುಚ್ಚು ಮನಸಿನ ಸಾಗರದಲ್ಲಿ ಉಳಿದದ್ದು ನಿನ್ನ ನೆನಪುಗಳು ಮಾತ್ರ,
ನೆನಪುಗಳ ಹಾಯುತ್ತಿದಾಗ ಮತ್ತೆ ಮತ್ತೆ ಕಂಡದ್ದು ನಿನ್ನ ಹೆಜ್ಜೆ ಗುರುತುಗಳು ಮಾತ್ರ!
ಇಂತಿ ನಿನ್ನ ಪ್ರೀತಿಯ...
ಕಂಪನ

ಹೋಲಿಕೆ....

ಮೊಗದ ಮುದ್ದಾಟ ಸಾಕೆಂದು ಮುಡಿ ಸೇರಿದ ನಿನ್ನ ಮುಂಗುರುಳು,
ಭೂಮಿ ಆಕಾಶ ಬೆಸೆದ ಕಾಮನಬಿಲ್ಲಂತ ಹುಬ್ಬುಗಳು,
ಕನಸುಗಳ ಸಾಗರದಿ ಈಜಾಡುತ್ತಿರುವ ನಿನ್ನ ಕಣ್ ಬಿಂಬಕೆ ಚಾಮರವಾಗಿವೆ ರೆಪ್ಪೆಗಳು,
ಕುಡಿ ನೋಟದಿ ಕೊಲೆ ಮಾಡುವ ನಿನ್ನ ನಯನಗಳು,
ನಿನಗಾಗಿಯೇ ನಾ ಬರೆದೆ ಸುಂದರ ಕವನಗಳು....
ಇಂತಿ ನಿನ್ನ ಪ್ರೀತಿಯ...
ಕಂಪನ